ಕರ್ನಾಟಕ ಕೆಎಎಸ್‌ ನೇಮಕಾತಿ ಅಧಿಸೂಚನೆ – 2024 KAS Notification Details

ಕರ್ನಾಟಕ ರಾಜ್ಯ ಸರ್ಕಾರ ಗೆಜೆಟೆಡ್ ಪ್ರೋಬೆಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ 2024ರ (KAS Notification) ಅಧಿಸೂಚನೆಯನ್ನು ಇದೀಗ ಪ್ರಕಟಿಸಲಾಗಿದ್ದು ಈ ಒಂದು ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.  

ಸ್ನೇಹಿತರೆ ಕರ್ನಾಟಕ ರಾಜ್ಯ ಕೆಎಎಸ್ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಇರತಕ್ಕಂತಹ ಅರ್ಹತೆ, ವಯೋಮಿತಿ, ಸ್ಪರ್ಧಾತ್ಮಕ ಪರೀಕ್ಷೆಯ ಪ್ಯಾಟರ್ನ್ ಮತ್ತು ಸಿಲಬಸ್ ಬಗ್ಗೆ ಹಲವಾರು ಅಂಶಗಳ ಕುರಿತು ಈ ಒಂದು ಆರ್ಟಿಕಲ್ ನಲ್ಲಿ ಸಂಪೂರ್ಣವಾದ ಮಾಹಿತಿ ನೀಡಲಾಗಿದೆ. 

KAS Notification : ಖಾಲಿ ಹುದ್ದೆಗಳ ಮಾಹಿತಿ

KAS New Notification Group A

KAS Group B Post

KAS Group B Post

ಪ್ರಮುಖವಾಗಿ ಈ ಒಂದು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸುವ ದಿನಾಂಕ ಈ ಕೆಳಕಂಡಂತೆ ನೀಡಲಾಗಿದೆ.

ಅರ್ಜಿಯನ್ನ ಸಲ್ಲಿಸುವ ಪ್ರಾರಂಭದ ದಿನಾಂಕ : 04-03-2024

ಅರ್ಜಿಯನ್ನ ಸಲ್ಲಿಸುವ ಕೊನೆಯ ದಿನಾಂಕ : 03-04-2024

ಪೂರ್ವಭಾವಿ ಪರೀಕ್ಷೆಯ ದಿನಾಂಕ : 05-05-2024

ಪ್ರಮುಖ ಸೂಚನೆಗಳು

ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿರುತ್ತೆ ಆನ್ಲೈನ್ ಹೊರತುಪಡಿಸಿ ಯಾವುದೇ ರೀತಿ ಅರ್ಜಿಯನ್ನು ಸಲ್ಲಿಸಲು ಬರುವುದಿಲ್ಲ 

Note : ಅಭ್ಯರ್ಥಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಯಾವುದೇ ರೀತಿ ತಪ್ಪು ಮಾಹಿತಿಯನ್ನು ತುಂಬಿ ಅರ್ಜಿಯನ್ನು ಸಲ್ಲಿಸಬಾರದು  ಅಭ್ಯರ್ಥಿಗಳು ಅರ್ಜಿಯ Final submit  ಕೊಡುವುದಕ್ಕಿಂತ ಮೊದಲು ತಾವು ಆನ್ಲೈನಲ್ಲಿ ತುಂಬಿರತಕ್ಕಂತ ಎಲ್ಲಾ ಮಾಹಿತಿ ಸರಿಯಾಗಿ ಇದೆ ಎಂಬುದನ್ನು ಸರಿಯಾಗಿ ನೋಡಿಕೊಂಡು ನಂತರವಷ್ಟೇ Final Submit  ನೀಡಬೇಕಾಗುತ್ತದೆ.  ನಂತರದಲ್ಲಿ ಅಭ್ಯರ್ಥಿ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿ ಅವಕಾಶ ಇರುವುದಿಲ್ಲ ಗಮನದಲ್ಲಿ ಇರಲಿ. 

Note:

ಇನ್ನು ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸುವಾಗ ತಾವು ಕೋರಿರುವ ಮೀಸಲಾತಿ ಪ್ರಮಾಣ ಪತ್ರಗಳು,  ವಿದ್ಯಾರ್ಹತೆ ಪ್ರಮಾಣ ಪತ್ರಗಳು ಇದರ ಎಲ್ಲಾ ದಾಖಲೆಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಚಾಲ್ತಿಯಲ್ಲಿ ಇರುವಂತೆ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಬೇಕು. ಒಂದು ವೇಳೆ ತಪ್ಪು ಮಾಹಿತಿಯನ್ನು ನೀಡಿ ಮತ್ತು ತಪ್ಪು ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಿದ್ದಲ್ಲಿ ಅಭ್ಯರ್ಥಿಗಳ ಅರ್ಜಿಯನ್ನ ತಿರಸ್ಕರಿಸಲಾಗುತ್ತದೆ. 

ಅಭ್ಯರ್ಥಿಗಳು ತಾವು ವಿವಿಧ ಮೀಸಲಾತಿ ಕೋರಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಸೂಕ್ತ ದಾಖಲಾತಿಗಳನ್ನು ಸರಿಯಾದ ಪ್ರಮಾಣದಲ್ಲಿ ಸ್ಪಷ್ಟವಾಗಿ ಕಾಣುವಂತೆ ಅಪ್ಲೋಡ್ ಮಾಡಬೇಕಾಗುತ್ತದೆ.  ಅಭ್ಯರ್ಥಿ ಅಸ್ಪಷ್ಟ ಕಾಣುವ ಯಾವುದೇ ದಾಖಲೆಯಾಗಲಿ ಅಥವಾ ಯಾವುದೇ ಮಾಹಿತಿಯಾಗಲಿ ನೀಡಬಾರದು. 

ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಮುಖ್ಯವಾಗಿ ಮೇಲೆ ನೀಡಲಾದ ಪ್ರಮುಖ ಸೂಚನೆಗಳನ್ನು ಓದಿಕೊಂಡು ನಂತರವಷ್ಟೇ ಅರ್ಜಿಯನ್ನು ಸಲ್ಲಿಸಬೇಕು. 

Application fees

ಅರ್ಜಿ ಶುಲ್ಕದ ವಿವರ
TABLE HEADER 2

ಆನ್ಲೈನ್ ಮೂಲಕ ಮಾತ್ರ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತೆ ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಕಾರಣಕ್ಕು ಹಿಂತಿರುಗಿಸಲಾಗುವುದಿಲ್ಲ. 

No of Attempts : ವಿವಿಧ ಕೆಟಗರಿಗೆ ಇರುವ ಪ್ರಯತ್ನಗಳ ಸಂಖ್ಯೆ

ಶೈಕ್ಷಣಿಕ ವಿದ್ಯಾರ್ಹತೆ

ಪ್ರಮುಖವಾಗಿ ಈ ಒಂದು ಹುದ್ದೆಗಳಿಗೆ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದು (Any Degree) 

ಈ ಒಂದು ಪೂರ್ವಭಾವಿ ಪರೀಕ್ಷೆಯ ಅರ್ಜಿಗೆ ಸಂಬಂಧಪಟ್ಟಂತೆ ಅಂತಿಮ ವರ್ಷದ ಪದವಿ ಓದುತ್ತಿರುವ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು ಆದರೆ ಒಂದು ವೇಳೆ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿದ್ದಲ್ಲಿ ಅವರ ಫಲಿತಾಂಶ ಬಂದಿರಬೇಕು.

ಹುದ್ದೆಗೆ ನಿಗದಿಪಡಿಸಿದ ವಯೋಮಿತಿ

KAS Age Limit

ನೇಮಕಾತಿಗೆ ಸಂಬಂಧಪಟ್ಟಂತೆ ವಯೋಮಿತಿ ಸಡಿಲಿಕೆ ಕೂಡ ಇರತಕ್ಕಂತಹದು. ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ವಿಧವಾ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ. ಮತ್ತು ಎಲ್ಲಾ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಎಷ್ಟು ವರ್ಷ ಸೇವೆ ಸಲ್ಲಿಸಿದ್ದಾರೆ ಮತ್ತು ಅದಕ್ಕೆ ಮೂರು ವರ್ಷ ಸೇರಿಸಿದರೆ ಎಷ್ಟು ವರ್ಷವಾಗುತ್ತದೆ ಅಷ್ಟು ವರ್ಷ ವಯೋಮಿತಿ ಸಡಿಲಿಕೆ ಇದೆ. 

ನೇಮಕಾತಿ ವಿಧಾನಗಳು

ಈ ಒಂದು ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತಹ ಸಂಪೂರ್ಣ ಎಕ್ಸಾಮ್ ಪ್ಯಾಟರ್ನ್ ಮತ್ತು ಸಿಲಬಸ್ ಕೆಳಗೆ ನೀಡಲಾದ ಲಿಂಕ್ ಮೇಲೆ ನೀಡಲಾಗಿದ್ದು ಅಭ್ಯರ್ಥಿಗೂ ಡೌನ್ಲೋಡ್ ಮಾಡಿಕೊಳ್ಳಬಹುದು. 

ಅರ್ಜಿ ಸಲ್ಲಿಸುವ ವಿವಿಧ ಹಂತಗಳು

  • ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಲು ಆನ್ಲೈನ್ ಮುಖಾಂತರ ಮಾತ್ರ ಅವಕಾಶ ಇದೆ. 
  • ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಆಫೀಸಿಯಲ್ ನೇಮಕಾತಿ ವೆಬ್ಸೈಟ್ https://kpsconline.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 
  • ನಂತರ ಒಂದು ಬಾರಿಗೆ ಮಾತ್ರ ಒನ್ ಟೈಮ್ ರಿಜಿಸ್ಟ್ರೇಷನ್ (ಒಂದು ಬಾರಿಗೆ ನೊಂದಣಿ) ಈ ಒಂದು Option ಮೇಲೆ ಕ್ಲಿಕ್ ಮಾಡಿ ನೋಂದಣಿ ಆದ ನಂತರ ಅರ್ಜಿಯನ್ನು ಸಲ್ಲಿಸಬಹುದು 

Official Website : KPSC Official Website

Spread the Knowledge

One thought on “ಕರ್ನಾಟಕ ಕೆಎಎಸ್‌ ನೇಮಕಾತಿ ಅಧಿಸೂಚನೆ – 2024 KAS Notification Details

Comments are closed.