KPSC Assistant Controller and Auditor Recruitment 2024 – Apply Now

ಸ್ನೇಹಿತರೆ ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ Assistant Controller and Audit Officer ಹುದ್ದೆಗಳಿಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಪ್ರದೇಶ ಮತ್ತು ಮಿಕ್ಕುಳಿದ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ  ಅಧಿಸೂಚನೆ ಹೊರಡಿಸಲಾಗಿತ್ತು ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಇಲಾಖೆಯ ಹೆಸರು

KPSC : ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ( Karnataka State Accounts Department) 

ಹುದ್ದೆಯ ಹೆಸರು

Group A : ಸಹಾಯಕ ನಿಯಂತ್ರಕರು

Group B : ಲೆಕ್ಕಪರಿಶೋಧನಾಧಿಕಾರಿ

KPSC ಹುದ್ದೆಗಳ ಮಾಹಿತಿ

assistant controller
audit officer

ವೇತನ ಶ್ರೇಣಿ

Group A : ಸಹಾಯಕ ನಿಯಂತ್ರಕರು : 52,650 to 97,100

Group B : ಲೆಕ್ಕಪರಿಶೋಧನಾಧಿಕಾರಿ : 43,100 to 83,900

ಶೈಕ್ಷಣಿಕ ವಿದ್ಯಾರ್ಹತೆ

ವಾಣಿಜ್ಯ ವಿಭಾಗದ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು .

M.Com or M.B.A

M.B.A In Finance (ಹಣಕಾಸು  ನಿರ್ವಹಣೆಯ ವಿಷಯ) or

M.B.A or M.Com ( ಹಣಕಾಸು ವಿಶ್ಲೇಷಣೆಯಲ್ಲಿ) 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ

ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ : 18-03-2024

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 17-04-2024

ಪೂರ್ವಭಾವಿ ಪರೀಕ್ಷಾ ದಿನಾಂಕ

ಮುಖ್ಯವಾಗಿ ಪೂರ್ವಭಾವಿ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಬೇರೆಯ ದಿನ ಹಾಗೂ ಮಿಕ್ಕುಳಿದ ವೃಂದದ ಅಭ್ಯರ್ಥಿಗಳ ಪೂರ್ವಭಾವಿ ಪರೀಕ್ಷೆಯನ್ನು ಬೇರೆಯ ದಿನ ನಡೆಸಲಾಗುತ್ತದೆ ಈ ಬಗ್ಗೆ ಪರೀಕ್ಷಾ ದಿನಾಂಕವನ್ನು ಕೆಳಗೆ ನೀಡಲಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ ಪರೀಕ್ಷಾ ದಿನಾಂಕ : 16-06-2024

ಮಿಕ್ಕುಳಿದ ವೃಂದದ ಪರೀಕ್ಷಾ ದಿನಾಂಕ : 02-06-2024

ವಯೋಮಿತಿ

ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗಾಗಿ ಈ ಕೆಳಕಂಡ ವಯೋಮಿತಿಯನ್ನು ಹೊಂದಿರಬೇಕು 

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 35 ವರ್ಷ.

ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ : 38 ವರ್ಷ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-01 ಅಭ್ಯರ್ಥಿಗಳಿಗೆ : 40 ವರ್ಷ

ವಯೋಮಿತಿ ಸಡಿಲಿಕೆ

ಈ ಒಂದು ನೇಮಕಾತಿಗೆ ಸಂಬಂಧಿಸಿದಂತೆ ನಿಯಮಗಳ ಪ್ರಕಾರ ವಯೋಮಿತಿ  ಸಡಿಲಿಕೆ ಇದೆ. 

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಮೂರು ವರ್ಷ ( ಸೇವಾ ಅವಧಿ+ ಮೂರು ವರ್ಷ ಹೆಚ್ಚಿನ ಅವಧಿ)

ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ 

ವಿಧವಾ ಅಭ್ಯರ್ಥಿಗಳಿಗೆ : 10 ವರ್ಷ

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು

ಅಭ್ಯರ್ಥಿಗಳು ಮುಖ್ಯವಾಗಿ ತಾವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಲ್ಲಾ ಮಾಹಿತಿ ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ.

ಅಭ್ಯರ್ಥಿಗಳು ವಿವಿಧ ಮೀಸಲಾತಿ  ಕೋರಿ ಅರ್ಜಿ ಸಲ್ಲಿಸಲು  ದಾಖಲೆಗಳು ಸ್ಪಷ್ಟವಾಗಿ ಕಾಣುವಂತಿರಬೇಕು. 

ಅಭ್ಯರ್ಥಿಗಳು ಒಂದು ವೇಳೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಅಭ್ಯರ್ಥಿಗಳು ತಾವು ಮುಖ್ಯವಾಗಿ Final Submit  ಕೊಡುವ ಮೊದಲು ನೀವು ತುಂಬಿರುವ ಅರ್ಜಿ ಸರಿಯಾಗಿ ಭರ್ತಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರ Final Submit  ನೀಡಬೇಕು. 

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ KPSC ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. 

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ : https://kpsc.kar.nic.in 

 ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೊದಲು ಒಂದು ಬಾರಿಗೆ ನೊಂದಣಿ One Time Registration (OTR) ನೋಂದಣಿಯನ್ನು ಮಾಡಬೇಕು.

ಅಭ್ಯರ್ಥಿಗಳು ತಾವು ನೋಂದಣಿ ಮಾಡಿದ ನಂತರ User ID and Password ಬಳಸಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಫೈನಲ್ ಅರ್ಜಿ ಸಲ್ಲಿಸುವ ಮೊದಲು ತಾವು ನೀಡಿರುವ ಮಾಹಿತಿ ಸರಿಯಾಗಿದೆಯೇ ? ಎಂಬುದನ್ನ ಖಚಿತಪಡಿಸಿಕೊಳ್ಳಬೇಕು ತದನಂತರ Final Submit  ಕೊಡಬೇಕು. 

ಅರ್ಜಿ ಶುಲ್ಕದ ವಿವರ

General : 600 

2A, 2B, 3A, 3B : 300 

ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 300

SC/ST/Cat-01 and ಅಂಗವಿಕಲ ಅಭ್ಯರ್ಥಿಗಳಿಗೆ : ಯಾವುದೇ ಅರ್ಜಿ ಶುಲ್ಕ ಇಲ್ಲ

ನೇಮಕಾತಿ ವಿಧಾನಗಳು

ಸ್ನೇಹಿತರೆ ಮುಖ್ಯವಾಗಿ ಈ ಒಂದು ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದರ ಮೂಲಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.  ಸ್ಪರ್ಧಾತ್ಮಕ ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಬೇರೆ ಹಾಗೂ ಮಿಕ್ಕುಳಿದ ವೃಂದದ ಅಭ್ಯರ್ಥಿಗಳಿಗೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ ಆದರೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ಯಾಟರ್ನ್ ಮತ್ತು ಸಿಲಬಸ್ ಒಂದೇ ಆಗಿರುತ್ತದೆ

ಮುಖ್ಯವಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ  ಹಾಗೂ ಮಿಕ್ಕುಳಿದ  ವೃಂದದ ಅಭ್ಯರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ  ಬೇರೆ ಬೇರೆ ದಿನಾಂಕದಂದು ನಿಗದಿಪಡಿಸಲಾಗಿರುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಯ ಹಂತಗಳು

ಮುಖ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಹಂತಗಳನ್ನು ಒಳಗೊಂಡಿದೆ. 

  1. ಪೂರ್ವಭಾವಿ ಪರೀಕ್ಷೆ (MCQ)  ಮುಖ್ಯವಾಗಿ ಪೂರ್ವಭಾವಿ ಪರೀಕ್ಷೆಯನ್ನು ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲು ನಡೆಸಲಾಗುತ್ತದೆ. 
  2. ಮುಖ್ಯ ಪರೀಕ್ಷೆ (Descriptive) ಇದು ವಿವರಣಾತ್ಮಕ ಪರೀಕ್ಷೆಯಾಗಿದ್ದು ಈ ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮೆರಿಟ್ ಲಿಸ್ಟ್ ಗೆ ಕನ್ಸಿಡರ್ ಮಾಡಲಾಗುತ್ತದೆ. .

Notification Link

Apply Here HK and NHK

Spread the Knowledge

Leave a Reply

Your email address will not be published. Required fields are marked *