KPSC ಇಂದ Land Surveyor ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ ಹೈದಾರಾಬಾದ್-ಕರ್ನಾಟಕ ಸ್ಥಳೀಯ ವೃಂದ ಹಾಗೂ ಉಳಿಕೆ ಮೂಲ ವೃಂದದಲ್ಲಿ ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.

ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 10 ಏಪ್ರಿಲ್ 2024. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

Land Surveyor Recruitment 2024

ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
ವೇತನ ಶ್ರೇಣಿ: 23,500 ರೂ. ರಿಂದ 47,650 ರೂ.
ಹುದ್ದೆಗಳ ಸಂಖ್ಯೆ: 364
ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ವಿವರ:

ಭೂ ಮಾಪಕ (Land Surveyor HK) – 100
ಭೂ ಮಾಪಕ (Land Surveyor RPC) – 264

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 11/03/2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10/04/2024

ಶೈಕ್ಷಣಿಕ ವಿದ್ಯಾರ್ಹತೆ:

ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ 12th, ಸಿವಿಲ್ ಎಂಜಿನಿಯರಿಂಗ್‌, ಐಟಿಐ, ಡಿಪ್ಲೊಮಾ, ಬಿಇ / ಬಿ.ಟೆಕ್ ಹೊಂದಿರಬೇಕು.

ವಯೋಮಿತಿ:

ನೇಮಕಾತಿಯ ಪ್ರಕಾರ ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 35 ವರ್ಷಗಳು.

ವಯೋಮಿತಿ ಸಡಿಲಿಕೆ:

Cat-2A/2B/3A/3B ಅಭ್ಯರ್ಥಿಗಳಿಗೆ: 03 ವರ್ಷಗಳು
SC/ST/Cat-1 ಅಭ್ಯರ್ಥಿಗಳಿಗೆ: 05 ವರ್ಷಗಳು
PWD/ವಿಧವೆ ಅಭ್ಯರ್ಥಿಗಳಿಗೆ: 10 ವರ್ಷಗಳು

ವೇತನ ಶ್ರೇಣಿ:

ರೂ. 23500-47650/- ಪ್ರತಿ ತಿಂಗಳು

ಅರ್ಜಿ ಶುಲ್ಕ:

SC/ST/Cat-I/PWD ಅಭ್ಯರ್ಥಿಗಳಿಗೆ: ಶುಲ್ಕ ಇರುವುದಿಲ್ಲ
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50/-
CAT -2A/2B/3A/3B ಅಭ್ಯರ್ಥಿಗಳಿಗೆ: ರೂ.300/-
ಸಾಮಾನ್ಯ ಅಭ್ಯರ್ಥಿಗಳಿಗೆ : ರೂ.600/-
ಪಾವತಿ ವಿಧಾನ: ಆನ್ಲೈನ್

ಪ್ರಮುಖ ಲಿಂಕ್‌ಗಳು:

ಭೂಮಾಪಕರಿಗೆ (HK) ಅಧಿಕೃತ ಅಧಿಸೂಚನೆ : ಅಧಿಸೂಚನೆ
ಭೂಮಾಪಕರಿಗೆ (RPC) ಅಧಿಕೃತ ಅಧಿಸೂಚನೆ : ಅಧಿಸೂಚನೆ
ಆನ್‌ಲೈನ್‌ನಲ್ಲಿ ಅನ್ವಯಿಸಿ: ಇಲ್ಲಿ ಅನ್ವಯಿಸಿ 
ಅಧಿಕೃತ ವೆಬ್‌ಸೈಟ್: kpsc.kar.nic.in

ವಿಶೇಷ ಸೂಚನೆ:

ಈ ಹುದ್ದೆಗಳು ಗ್ರೂಪ್ ‘ಸಿ’ ಹುದ್ದೆಗಳಾಗಿರುವುದರಿಂದ ಆನ್‌ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳ ಆಧಾರದ ಮೇಲೆ ಮಾತ್ರವೇ ದಾಖಲೆಗಳ ಪರಿಶೀಲನೆ ಮಾಡಲಾಗುವುದು. ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಮೂಲ ದಾಖಲೆಗಳ ಪರಿಶೀಲನೆಯನ್ನು ನಡೆಸಲು ತೀರ್ಮಾನಿಸಿದಲ್ಲಿ ಈಗಾಗಲೇ ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಿರುವ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸತಕ್ಕದು, ಏನೇ ಸಂದರ್ಭವಿದ್ದರೂ ವಯೋಮಿತಿ, ವಿದ್ಯಾರ್ಹತೆ ಮತ್ತು ಮೀಸಲಾತಿಗಳಿಗೆ ಸಂಬಂಧಿಸಿದಂತೆ ಆನ್‌ಲೈನ್‌ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಆಪ್‌ಲೋಡ್ ಮಾಡಲಾದ ಪ್ರಮಾಣ ಪತ್ರಗಳನ್ನೇ ಅಂತಿಮವೆಂದು ತೀರ್ಮಾನಿಸಲಾಗುತ್ತದೆ. ಆದ್ದರಿಂದ, ಅರ್ಜಿದಾರರು ಎಲ್ಲಾ ಸಂಬಂಧಿತ ದಾಖಲೆಗಳನ್ನು ಎಚ್ಚರಿಕೆಯಿಂದ ಮತ್ತು ಸ್ಪಷ್ಟವಾಗಿ ಅಪ್‌ಲೋಡ್ ಮಾಡಬೇಕು.

Spread the Knowledge