ಆರ್‌ಆರ್‌ಬಿಯಿಂದ 9144 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ – RRB Technician Recruitment 2024

ಭಾರತೀಯ ರೈಲ್ವೆ ಇಲಾಖೆಯಿಂದ ಟೆಕ್ನಿಷಿಯನ್ (RRB Technician) ನೇಮಕದ ವಿಸ್ತೃತ ಅಧಿಸೂಚನೆಯನ್ನು ಪ್ರಕಟಿಸಿದ್ದು ಆನ್ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ರೈಲ್ವೆ ಇಲಾಖೆಯ 9144 ಟೆಕ್ನಿಷಿಯನ್ ಹುದ್ದೆಗಳಿಗೆ ಅಭ್ಯರ್ಥಿಗಳು ಏಪ್ರಿಲ್ 8ರ ತನಕ ಅರ್ಜಿ  ಸಲ್ಲಿಸಬಹುದಾಗಿದೆ. ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ವಿಭಾಗದಲ್ಲಿ 1092 ಮತ್ತು ಟೆಕ್ನಿಷಿಯನ್ ಗ್ರೇಡ್ 3 ವಿಭಾಗದಲ್ಲಿ 8052 ಹುದ್ದೆಗಳು ಸೇರಿ ಒಟ್ಟು 9144 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳ ವಿವರ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹಾಗೂ ಪ್ರಮುಖ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

RRB Technician

ಪರೀಕ್ಷೆ ದಿನಾಂಕ ಪ್ರಕಟಿಸಿದ ಭಾರತೀಯ ರೈಲ್ವೆ ಇಲಾಖೆಯು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅಪ್ಪಣೆ ನೀಡಲಾಗಿದೆ. ರಾಜ್ಯದ ನೈರುತ್ಯ ವಲಯಕ್ಕೆ 44 ಸಿಗ್ನಲ್ ಒಂದು ಹುದ್ದೆಗಳು ಸೇರಿದಂತೆ 426 ಹುದ್ದೆಗಳನ್ನು ನಮ್ಮ ರಾಜ್ಯಕ್ಕೆ ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಸಿಬಿಟಿ ಮೂಲಕವೇ ಅಂದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕವೇ ಆಕೆ ನಡೆಯಲಿದ್ದು ಸಿ ಬಿ ಟಿ ದಿನವನ್ನು ಇನ್ನು  ನಿಗದಿಪಡಿಸಲಾಗಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ www.rrbapply.gov.in ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಏಪ್ರಿಲ್ 8 2024

ಆರಂಭಿಕ ವೇತನ : 29,200  ರೂ. (ಗ್ರೇಡ್ 1),  19,900  (ಗ್ರೇಡ್ 3) 

E-mail : rrbhelp@csc.gov.in

For more information : www.rrbbnc.gov.in

ಆರ್ ಆರ್ ಬಿ ನೇಮಕಾತಿಯ ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಟೆಕ್ನಿಷಿಯನ್ ಗ್ರೇಡ್ – 1 ಮತ್ತು ಗ್ರೇಡ್ – 3 ಈ ಎರಡು ವಿಭಾಗಗಳಿಗೂ ಪ್ರತ್ಯೇಕ ಸಿ ಬಿ ಟಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿ ಪರೀಕ್ಷೆ ನಡೆಯುವ ಸ್ಥಳವನ್ನು ಆರ್‌ಆರ್‌ಬಿ ವೆಬ್ಸೈಟ್, ಎಸ್ಎಂಎಸ್ ಮತ್ತು ಇಮೇಲ್ ಮೂಲಕ ನೀಡಲಾಗುವುದು.

ಅರ್ಹತೆಗಳು:

ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ :  ಈ ಒಂದು  ವಿಭಾಗದ ಹುದ್ದೆಗಳಿಗೆ,  ಅಭ್ಯರ್ಥಿಯ ಬಿಎಸ್ಸಿ ವ್ಯಾಸಂಗ ಪೂರ್ಣಗೊಂಡಿರಬೇಕು ಅಂದರೆ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್,  ಇಂಫಾರ್ಮೇಷನ್ ಟೆಕ್ನಾಲಜಿ, ಫಿಸಿಕ್ಸ್, ಎಲೆಕ್ಟ್ರಾನಿಕ್ಸ್, ಇನ್ಸ್ಟ್ರುಮೆಂಟೇಶನ್ ಇವುಗಳಲ್ಲಿ ಯಾವುದಾದರು ಒಂದು ವಿಷಯದಲ್ಲಿ ನಿಗದಿತ ವಿದ್ಯಾರ್ಥಿ ಹೊಂದಿರಬೇಕು ಅಥವಾ 3 ಇಂಜಿನಿಯರಿಂಗ್ ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಪದವಿ ತೇರ್ಗಡೆಯಾಗಿದ್ದರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಟೆಕ್ನಿಷಿಯನ್ ಗ್ರೇಡ್ 3: ಈ ವಿಭಾಗದಲ್ಲಿ ಅಭ್ಯರ್ಥಿಗಳನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆಯನ್ನು ಮಾಡುತ್ತಾರೆ.  ಬ್ಲಾಕ್ ಸ್ಮಿತ್, ಬ್ರಿಡ್ಜ್, ಕ್ರೇನ್ ಡ್ರೈವರ್, ಡೀಸೆಲ್, ಎಲೆಕ್ಟ್ರಿಕಲ್, ಇಎಂಯು,  ಫಿಟ್ಟರ್, ರೆಫ್ರಿಜರೇಷನ್ ಅಂಡ್ ಏರ್ ಕಂಡೀಶನಿಂಗ್, ಟ್ರ್ಯಾಕ್ ಮಷೀನ್ ವೆಲ್ಡರ್ ಸೇರಿದಂತೆ ವಿವಿಧ ಕ್ಷೇತ್ರಗಳಿವೆ. ಇವುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯೂಲೇಷನ್‌ ಜೊತೆಗೆ ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ:

  1. ಟೆಕ್ನಿಷಿಯನ್ ಗ್ರೇಡ್ – 1 ಸಿಗ್ನಲ್ ಹುದ್ದೆಗೆ 18 ರಿಂದ 36 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.   
  2. ಮತ್ತು ಟೆಕ್ನಿಷಿಯನ್ ಗ್ರೇಡ್ 3 18 ರಿಂದ 33 ವರ್ಷದೊಳಗಿನವರು ಪ್ರಯತ್ನಿಸಬಹುದಾಗಿದೆ.
  3. ವಯಸ್ಸಿನ ಅರ್ಹತೆಯನ್ನು ದಿನಾಂಕ 01-07-2024 ಕ್ಕೆ ಪರಿಗಣಿಸಲಾಗುವುದು.
  4. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗದವರಿಗೆ 3 ವರ್ಷ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನಿಯಮ ಅನುಸಾರ ವಯೋಮಿತಿ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ, ಮಾಜಿ ಸೈನಿಕರು, ಮಹಿಳೆಯರು, ಅಲ್ಪಸಂಖ್ಯಾತ ಅಭ್ಯರ್ಥಿಗಳು, ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 250ರೂ. (ಪೂರ್ತಿ ರೆಫಂಡ್ ಮಾಡಲಾಗುತ್ತದೆ) ಹಾಗೂ ಉಳಿದೆಲ್ಲ ವರ್ಗದವರು 500ರೂ. (400ರೂ. ರಿಫಂಡ್ ಮಾಡಲಾಗುತ್ತದೆ) ಶುಲ್ಕ ಪಾವತಿಸಬೇಕು. ಆದರೆ, ನೇಮಕಾತಿಗಾಗಿ ರೈಲ್ವೆ ನೇಮಕ ಮಂಡಳಿ ನಡೆಸುವ ಸಿಬಿಟಿ (ಅಂದರೆ ಕಂಪ್ಯೂಟರ್ ಆದರಿತ ಪರೀಕ್ಷೆ) ಬರೆದರೆ ಮಾತ್ರ ಶುಲ್ಕ ವಾಪಸ್ ಪಡೆಯಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  1. ಅಭ್ಯರ್ಥಿಗಳು ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ https://www.rrbbnc.gov.in/
  2. ವೆಬ್ಸೈಟ್ನ ಮುಖಪುಟದಲ್ಲಿ ‘CEN 02/2024 – Technician Categories Detailed CEN NEW’  ಎಂಬ ಬಟನ್ ನೀಡಲಾಗಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ  ಇಂಗ್ಲೀಷ್, ಹಿಂದಿ ನೋಟಿಫಿಕೇಶನ್ ಅನ್ನು ಓದಬಹುದು
  3. ಮುಖಪುಟದಲ್ಲಿ ಕಾಣಸಿಗುವ ‘Click to Submit Online Application’  ಬಟನ್ ಮೇಲೆ ಕ್ಲಿಕ್ ಮಾಡಿ,  ನಂತರ ವೆಬ್ಸೈಟ್ ಇನ್ನೊಂದು ಪೇಜ್ ಗೆ ರೀಡೈರೆಕ್ಟ್ ಆಗುತ್ತದೆ.
  4. ಅದರ ನಂತರ, ಅಲ್ಲಿ “Apply Online” ಎಂದು ನಮೂದಿಸಿದ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  5. ಇಲ್ಲಿ, ನಿಮ್ಮ ಎಲ್ಲಾ ವಿವರಗಳನ್ನು (ಹೆಸರು, ನೋಂದಣಿ ಸಂಖ್ಯೆ, ಜನ್ಮ ದಿನಾಂಕ, ಇತ್ಯಾದಿ) ನಮೂದಿಸಬೇಕು.
  6. ನಂತರ, ಅರ್ಹತಾ ಪ್ರಮಾಣಪತ್ರಗಳು, ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು, ಗುರುತಿನ ಪುರಾವೆಗಳು ಇತ್ಯಾದಿಗಳನ್ನು ಒಳಗೊಂಡಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
  7. ಅಂತಿಮವಾಗಿ ಆನ್‌ಲೈನ್ ಪಾವತಿ ವಿಧಾನಗಳ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ.
  8. ಸಲ್ಲಿಸಿದ ಅರ್ಜಿಯನ್ನು ಮುಂದಿನ ಉಪಯುಕ್ತ ಉದ್ದೇಶಗಳಿಗಾಗಿ ಬಳಸಲು ಅದನ್ನು  ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.

ಸೂಚನೆ:

ಅಭ್ಯರ್ಥಿಗಳು ಆನ್ಲೈನ್ ಅಪ್ಲಿಕೇಶನ್ ಹಾಕುವ ವೇಳೆಯಲ್ಲಿ, Create an Account ಎಂದು ಕೇಳಲಾಗುತ್ತದೆ.  ಅಭ್ಯರ್ಥಿಗಳು ಮೊದಲೇ ಅಕೌಂಟ್ ನ ಕ್ರಿಯೇಟ್ ಮಾಡಿದ್ದಲ್ಲಿ, ಅಭ್ಯರ್ಥಿಗಳು ಅಕೌಂಟ್ ನ ಕ್ರಿಯೇಟ್ ಮಾಡುವಾಗ ಕೊಟ್ಟಂತಹ credentials ಅನ್ನು ಲಾಗಿನ್ ಸಮಯದಲ್ಲಿ ಬಳಸಬೇಕು.

ಅಕೌಂಟ್ ಕ್ರಿಯೇಟ್ ಆಗದೇ ಇದ್ದಲ್ಲಿ ಅಭ್ಯರ್ಥಿಗಳು ತಮ್ಮ ಹೆಸರು ತಂದೆಯ ಹೆಸರು ತಾಯಿಯ ಹೆಸರು ಜನ್ಮ ದಿನಾಂಕ ಲಿಂಗ ವಿಳಾಸ ಮೊಬೈಲ್ ಸಂಖ್ಯೆ ಇಮೇಲ್ ಆಧಾರ್ ಕಾರ್ಡ್ ನ ವಿವರಗಳನ್ನು ನೀಡಿ ಅಕೌಂಟ್ ನ ಕ್ರಿಯೇಟ್ ಮಾಡಬಹುದಾಗಿದೆ. 

ಅಕೌಂಟ್‌ ಕ್ರಿಯೇಟ್‌ ಆದ ನಂತರ ಮತ್ತೆ ಲಾಗಿನ್‌ ಆಗಿ ವಿದ್ಯಾರ್ಹತೆ, ಮೀಸಲಾತಿ, ವೈಯಕ್ತಿಕ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.

ನಿಷೇಧಿತ ವಸ್ತುಗಳು:

ಅಭ್ಯರ್ಥಿಗಳು ಸಂವಹನ ಸಾಧನಗಳು (communication devices) ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು (ಮೊಬೈಲ್ ಫೋನ್‌ಗಳು, ಬ್ಲೂಟೂತ್, ಪೆನ್ ಡ್ರೈವ್, ಲ್ಯಾಪ್‌ಟಾಪ್‌ಗಳು, ಕ್ಯಾಲ್ಕುಲೇಟರ್‌ಗಳು, ಸ್ಮಾರ್ಟ್ ವಾಚ್‌ಗಳು), ಬಳೆಗಳು, ಚೈನ್‌ಗಳು, ಕಡಗಗಳು, ಶ್ರವಣ ಸಾಧನಗಳು, ವ್ಯಾಲೆಟ್‌ಗಳು/ಪರ್ಸ್‌ಗಳು, ಬೆಲ್ಟ್‌ಗಳು, ಶೂಗಳು, ಲೋಹೀಯ ಉಡುಪುಗಳು, ಇತ್ಯಾದಿ, ಅಥವಾ ಪೆನ್ನು/ಪೆನ್ಸಿಲ್‌ನಂತಹ ಯಾವುದೇ ಸ್ಟೇಷನರಿ ವಸ್ತುಗಳನ್ನು ಪರೀಕ್ಷೆಯಲ್ಲಿ ಅನುಮತಿಸಲಾಗುವುದಿಲ್ಲ. ಯಾವುದೇ ಉಲ್ಲಂಘನೆ ಆದಲ್ಲಿ ಕಾನೂನು ಕ್ರಮ ಮತ್ತು ಭವಿಷ್ಯದ ನೇಮಕಾತಿ ಪರೀಕ್ಷೆಗಳಿಂದ ಡಿಬಾರ್‌ಮೆಂಟ್ ಜೊತೆಗೆ ಅನರ್ಹತೆಗೆ ಮಾಡಲಾಗುವುದು.

Important:

ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ತುಂಬಿದ ಜನ್ಮ ದಿನಾಂಕವು ಅವರ ಮೆಟ್ರಿಕ್ಯುಲೇಷನ್ / ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪ್ರಮಾಣಪತ್ರದಲ್ಲಿ ದಾಖಲಿಸಿದಂತೆಯೇ ಇರಬೇಕು ಎಂಬುದನ್ನು ಗಮನಿಸಬೇಕು. ಜನ್ಮ ದಿನಾಂಕದ ಬದಲಾವಣೆಗೆ ಯಾವುದೇ ನಂತರದ ವಿನಂತಿಯನ್ನು ಪರಿಗಣಿಸಲಾಗುವುದಿಲ್ಲ. ಹುಟ್ಟಿದ ದಿನಾಂಕದಲ್ಲಿನ ಯಾವುದೇ ವ್ಯತ್ಯಾಸವು ಅಭ್ಯರ್ಥಿಯ ಅನರ್ಹತೆಗೆ ಕಾರಣವಾಗುತ್ತದೆ.

Spread the Knowledge