Karnataka BMTC Recruitment 2024 – ಇಂದೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ BMTC ನಲ್ಲಿ ಖಾಲಿ ಇರುವ Conductor ನಿರ್ವಾಹಕ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಆಫೀಸಿಯಲ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಈ ಒಂದು ನೇಮಕಾತಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. 

ಕಲ್ಯಾಣ ಕರ್ನಾಟಕ ವೃಂದದ ಮತ್ತು ಮಿಕ್ಕುಳಿದ ವೃಂದದ ಮೀಸಲಾತಿಗೆ ಸಂಬಂಧಪಟ್ಟಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಒಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ. 

BMTC Recruitment : ಒಟ್ಟು ಹುದ್ದೆಗಳ ವಿವರ

BMTC Vaccancies

Educational Qualification : ಶೈಕ್ಷಣಿಕ ವಿದ್ಯಾರ್ಹತೆ

ಮುಖ್ಯವಾಗಿ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು (Arts/science/Commerce)

Or ICSE 0r 10+2 ವಿದ್ಯಾರ್ಹತೆ ಅಥವಾ CBSE ಕ್ಲಾಸ್ 12th or 3 Years Diploma 

ಹಾಗೂ ಮಾನ್ಯತೆ ಹೊಂದಿರುವ ಮೋಟಾರ್ ವಾಹನ ನಿರ್ವಾಹಕ ಪರವಾನಿಗೆ ಹೊಂದಿರಬೇಕು. 

ನೇಮಕಾತಿಯ ಪ್ರಮುಖ ಸೂಚನೆಗಳು

ಮುಖ್ಯವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಿರುವ ಹುದ್ದೆಗಳಿಗೆ ಕೇವಲ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾತ್ರ ಅರ್ಹತೆ ಇರುತ್ತೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಮಿಕ್ಕುಳಿದ ಮತ್ತು ಸ್ಥಳೀಯ ವೃಂದದ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಈ ಬಗ್ಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವಾಗ ತಿಳಿಸಬೇಕಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ಎರಡು ಭಾಗಗಳಿಗೆ ಅರ್ಜಿಯನ್ನು ಸಲ್ಲಿಸಿದಾಗ ಒಂದೇ ಪರೀಕ್ಷೆ ನಡೆಸಲಾಗುತ್ತದೆ ಮತ್ತು ಎರಡಕ್ಕೂ ಆ ಪರೀಕ್ಷೆ ಫಲಿತಾಂಶವನ್ನೇ ಪರಿಗಣಿಸಲಾಗುತ್ತದೆ.

 

ಮಿಕ್ಕುಳಿದ ವೃಂದದ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಕೇವಲ ಮಿಕ್ಕುಳಿದ ವೃಂದಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ಮಿಕ್ಕುಳಿದ ವೃಂದದ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ 

ವಯೋಮಿತಿ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ಒಳಗೆ ಅಭ್ಯರ್ಥಿಗಳು ಈ ಕೆಳಕಂಡಂತೆ ನೀಡಲಾಗಿರುವ ವಯೋಮಿತಿಯನ್ನು ಹೊಂದಿರಬೇಕು. 

General : ಕನಿಷ್ಠ 18 ವರ್ಷ  ಗರಿಷ್ಠ : 35 ವರ್ಷ

2A, 2B, 3A, 3B : ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ

SC/ST/Car-1 : ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ

ಮಾಜಿ ಸೈನಿಕ ಅಭ್ಯರ್ಥಿಗಳಿಗೆ 45 ವರ್ಷ ವಯೋಮಿತಿ.

ವೇತನ ಶ್ರೇಣಿ

18660 to 25300 ಉತ್ತಮವಾದ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ 

ಅರ್ಜಿಯನ್ನು ಸಲ್ಲಿಸುವ ಅಫಿಶಿಯಲ್ ವೆಬ್ಸೈಟ್

ಮುಖ್ಯವಾಗಿ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಆಗಿರುವ http://kea.kar.nic.in ಈ ಒಂದು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸುವ ಪ್ರಮುಖ ದಿನಾಂಕಗಳು

ಅರ್ಜಿಯನ್ನು ಸಲ್ಲಿಸುವ ಪ್ರಾರಂಭದ ದಿನಾಂಕ : 10-3-2024

ಅರ್ಜಿಯನ್ನ ಸಲ್ಲಿಸುವ ಕೊನೆಯ ದಿನಾಂಕ : 10-4-2024

ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಕೊನೆಯ ದಿನಾಂಕ : 13-4-2024 

ಅರ್ಜಿ ಶುಲ್ಕದ ವಿವರಗಳು

ಸಾಮಾನ್ಯ ಅರ್ಹತೆ,  ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ : 750 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ ಒಂದು ಮತ್ತು ಎಲ್ಲಾ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅಂಗವಿಕಲ ಅಭ್ಯರ್ಥಿಗಳಿಗೆ : 500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳು ತಾವು ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದು.

ನೇಮಕಾತಿ ವಿಧಾನ

  1. ಎತ್ತರ : ಪುರುಷ ಅಭ್ಯರ್ಥಿ 160cm  ಮಹಿಳಾ ಅಭ್ಯರ್ಥಿಗಳು 150cm 
  2. ಸಾಮಾನ್ಯ ಅರ್ಹತಾ ಪರೀಕ್ಷೆ 

ಹೆಚ್ಚಿನ ಮಾಹಿತಿ

ಸ್ನೇಹಿತರೆ ಮುಖ್ಯವಾಗಿ ಈ ಒಂದು ನೇಮಕಾತಿಗೆ ಸಂಬಂಧಪಟ್ಟಂತಹ ಸ್ಪರ್ಧಾತ್ಮಕ ಪರೀಕ್ಷೆಯ ಎಕ್ಸಾಮ್ ಪ್ಯಾಟರ್ನ್,  ಸಿಲಬಸ್ ಯಾವ ರೀತಿಯಾಗಿ ಇರುತ್ತೆ ಹಾಗೂ ಈ ಒಂದು ನೇಮಕಾತಿಯ ವಿವಿಧ ಹಂತಗಳ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಆಫೀಶಿಯಲ್ ನೋಟಿಫಿಕೇಶನ್ ನೀಡಲಾಗಿದೆ ಅಭ್ಯರ್ಥಿಗಳು ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು.

Apply Link

Click Here for KAS Information

Spread the Knowledge

One thought on “Karnataka BMTC Recruitment 2024 – ಇಂದೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ

Leave a Reply

Your email address will not be published. Required fields are marked *