ಕರ್ನಾಟಕ ಅರಣ್ಯ ಇಲಾಖೆಯು 2023-24ನೇ ಸಾಲಿಗೆ 310 ಅರಣ್ಯ ರಕ್ಷಕರ (Forest Watcher) ನೇಮಕಾತಿಗಾಗಿ ದೈಹಿಕ ತಾಳ್ವಿಕೆ, ದೈಹಿಕ ಸಮರ್ಥತೆ ಪರೀಕ್ಷೆಗಳನ್ನು ಬಿಡುಗಡೆ ಮಾಡಿದೆ. ಜತೆಗೆ ಸದರಿ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುವ 1:20 ಅಭ್ಯರ್ಥಿಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.
ಇದೀಗ ವೃತ್ತವಾರು ದೈಹಿಕ ತಾಳ್ವಿಕೆ, ದೈಹಿಕ ಸಮರ್ಥತೆ ಪರೀಕ್ಷೆಗೆ ಅಂತಿಮ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಿದೆ.
Forest Watcher
310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಯಲ್ಲಿ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ 29-02-2024 ರಿಂದ 04-03-2024 ರವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ಯನ್ನು ನಡೆಸಲು ಉದ್ದೇಶಿಸಿ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.
ವೈದ್ಯಕೀಯ ಪರೀಕ್ಷೆಯ ವಿವರಗಳು ಮತ್ತು ಪರೀಕ್ಷೆಯ ಸ್ಥಳವನ್ನು ಸಂಬಂಧಿಸಿದ ಅರಣ್ಯ ಇಲಾಖೆಯ ಗೌರವ ಪಟ್ಟಿಯೊಂದಿಗೆ ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು, ದಯವಿಟ್ಟು ವೆಬ್‌ಸೈಟ್ https://kfdrecruitment.in/ ಗೆ ಭೇಟಿ ನೀಡಿ ಮತ್ತು ಪರಿಶೀಲನೆಗಾಗಿ ನಿಮ್ಮ ವಲಯದ ಮೆರಿಟ್ ಪಟ್ಟಿಯನ್ನು ಕ್ಲಿಕ್ ಮಾಡಿ.
ಮೇಲಿನ ಪರೀಕ್ಷೆಗಳಿಗೆ ಹಾಜರಾಗುವಾಗ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ತರಬೇಕು. ಮತ್ತು ಸೂಚನೆಗಳನ್ನು ಅನುಸರಿಸಿ.
ಅಗತ್ಯವಾಗಿ ಹಾಜರುಪಡಿಸಬೇಕಾದ ದಾಖಲೆಗಳು
- ಅರ್ಜಿಯಲ್ಲಿ ನಮೂದಿಸಿದ ಎಲ್ಲಾ ಮೂಲ ದಾಖಲಾತಿಗಳು
- ಮೂಲ ದಾಖಲಾತಿಗಳ ಸ್ವಯಂ ದೃಢೀಕೃತ 3 ಜೆರಾಕ್ಸ್ ಪ್ರತಿಗಳು
- ಅಭ್ಯರ್ಥಿಯ ಇತ್ತೀಚಿನ Pass Port ಅಳತೆಯ 5 ಭಾವಚಿತ್ರಗಳೊಂದಿಗೆ ಹಾಜರಾಗುವುದು.
- ಅಧಿಸೂಚನೆಯಲ್ಲಿ ನಮೂದಿಸಿದ ಯಾವುದಾದರೂ ಒಂದು ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ 2 ಸ್ವಯಂ ದೃಢೀಕೃತ ಪ್ರತಿಯನ್ನು ಸಲ್ಲಿಸುವುದು.
- ಸಾಮಾನ್ಯ ಅಂಗ ವಿಕಲ ಅಭ್ಯರ್ಥಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಅಭ್ಯರ್ಥಿಗಳ ಅಂಗವಿಕಲತೆಯನ್ನು ದೃಢೀಕರಿಸಲು ಆಧಾರವಾಗಿರುವ ಎಲ್ಲಾ ಸಂಬಂಧಿಸಿದ ವೈದ್ಯಕೀಯ ದಾಖಲಾತಿಗಳನ್ನು ಹಾಜರುಪಡಿಸುವುದು.
- ಸ್ಥಳೀಯ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡ [Local Forest Dwelling Tribes] ಪವರ್ಗದಡಿಯಲ್ಲಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮೂಲ ದಾಖಲಾತಿಗಳ ಪರಿಶೀಲನಾ ಸಮಯದಲ್ಲಿ ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕದೊಳಗೆ ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ದೃಢೀಕರಿಸಿ ಪಡೆದ ವಾಸಸ್ಥಳ ಪ್ರಮಾಣ ಪತ್ರವನ್ನು ಇನ್ನಿತರೆ ಮೂಲ ದಾಖಲಾತಿಗಳೊಂದಿಗೆ ಹಾಜರುಪಡಿಸತಕ್ಕದ್ದು.
- ಮೇಲ್ಕಂಡ ಪ್ರಕ್ರಿಯೆಯು ಒಂದು ದಿನಕ್ಕಿಂತ ಹೆಚ್ಚಿನ ದಿನ ನಡೆಯುವ ಸಂಭವವಿರುವುದರಿಂದ ತಂಗುವಿಕೆಗೆ ಎಲ್ಲಾ ಪೂರ್ವ ಸಿದ್ಧತೆಗಳೊಂದಿಗೆ ಹಾಜರಾಗಲು ತಿಳಿಸಿದೆ. ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ತಂಗುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು. ಪ್ರಯಾಣ ಭತ್ಯೆ ಇನ್ನಿತರ ಭತ್ಯೆಗಳನ್ನು ಇಲಾಖೆಯಿಂದ ನೀಡಲಾಗುವುದಿಲ್ಲ.
- ಹಾಜರಾಗಲು ನಿಗಧಿಪಡಿಸಿದ ದಿನಾಂಕದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದಿಲ್ಲ. ಮೇಲ್ಕಂಡ ದಿನಾಂಕದಂದು ನೀವು ಹಾಜರಾಗದೇ ಇದ್ದ ಪಕ್ಷ ದಲ್ಲಿ ಅರಣ್ಯ ವೀಕ್ಷಕ ಹುದ್ದೆಗೆ ಸೇರಲು ನಿಮಗೆ ಇಚ್ಛೆ ಇಲ್ಲವೆಂದು ಭಾವಿಸಿ ನಿಮ್ಮ ಹೆಸರನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.
- ದೈಹಿಕ ತಾಳ್ವಿಕೆ ಮತ್ತು ದೈಹಿಕ ಸಮರ್ಥತೆ ಪರೀಕ್ಷೆಗಳಲ್ಲಿ ಯಾವುದೇ ಅವಗಡ ಸಂಭವಿಸಿದಲ್ಲಿ ಇಲಾಖೆಯು ಹೊಣೆಗಾರರಾಗುವುದಿಲ್ಲ.
- ಅಭ್ಯರ್ಥಿಯು ಗರ್ಭಿಣಿಯರಾಗಿದ್ದಲ್ಲಿ ದೈಹಿಕ ತಾಳ್ವಿಕೆ ದೈಹಿಕ ಸಮರ್ಥತೆ ಪರೀಕ್ಷೆಗೆ ಭಾಗವಹಿಸುವ ಕುರಿತು ವಿನಾಯಿತಿ ನೀಡುವಂತೆ ಕೋರಿ ವೈದ್ಯಕೀಯ ದೃಢೀಕರಣ ಪತ್ರದೊಂದಿಗೆ ಮನವಿ ಪತ್ರವನ್ನು ಈ ಪರೀಕ್ಷೆಗಳು ನಡೆಯುವ ಪರೀಕ್ಷಾ ಕೇಂದ್ರದ ಆಯ್ಕೆ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನೀಡಿದ್ದಲ್ಲಿ ವಿನಾಯಿತಿ ನೀಡಲಾಗುವುದು.