ಬ್ಯಾಂಕ್ ನಲ್ಲಿ JA ಆಗಿ ಕೆಲಸ ನಿರ್ವಹಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಹೌದು ಇದೀಗ ಎಸ್ ಬಿ ಐ ಯಿಂದ ಮತ್ತೊಂದು ನೇಮಕಾತಿ ಸೂಚನೆ ಪ್ರಕಟವಾಗಿದೆ.
ಕೇಂದ್ರ ಸರ್ಕಾರದ ಉದ್ಯೋಗ ಆಕಾಂಕ್ಷಿಗಳಿಗೆ SBI ನಲ್ಲಿ ಖಾಲಿ ಇರುವ Junior Associate ಹುದ್ದೆಗಳಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಈ ಒಂದು ಹುದ್ದೆಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅಭ್ಯರ್ಥಿಗಳು ನೋಡಿಕೊಳ್ಳಬಹುದು.
ಇಲಾಖೆ ಹೆಸರು
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆಯ ಹೆಸರು
Junior Associate (JA) Clerk
SBI Total Post
8773 ಒಟ್ಟು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 17-11-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-12-2023
ಸ್ಪರ್ಧಾತ್ಮಕ ಪರೀಕ್ಷೆಯ ಪ್ರಮುಖ ದಿನಾಂಕಗಳು
SBI ಕ್ಲರ್ಕ್ ಪರೀಕ್ಷೆಯ ದಿನಾಂಕಗಳು 05, 06, 11, ಮತ್ತು 12 ಜನವರಿ 2024.
ಪೂರ್ವಭಾವಿ ಪರೀಕ್ಷೆ : ಜನವರಿ 2024
ಮುಖ್ಯ ಪರೀಕ್ಷೆ : ಫೆಬ್ರುವರಿ 2024
ವಯೋಮಿತಿ
ಕನಿಷ್ಠ 20 ವರ್ಷ
ಗರಿಷ್ಠ 28 ವರ್ಷ
ವಯೋಮಿತಿ ಸಡಿಲಿಕೆ
SC/ST : 05 ವರ್ಷ
OBC : 03 ವರ್ಷ
ಅಂಗವಿಕಲ ಅಭ್ಯರ್ಥಿಗಳಿಗೆ : ಹತ್ತು ವರ್ಷ ವಯೋಮಿತಿ ಇರ್ತಕ್ಕಂತದ್ದು
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಅವರು ಸೇವೆ ಸಲ್ಲಿಸಿದ ಅವಧಿ ಮತ್ತು ಹೆಚ್ಚುವರಿಯಾಗಿ ಮೂರು ವರ್ಷ
ಇತರೆ ವಯೋಮಿತಿ ಸಡಿಲಿಕೆ ನಿಯಮಗಳ ಪ್ರಕಾರ ಇರುತ್ತದೆ.
ವಿದ್ಯಾರ್ಹತೆ
ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿಯನ್ನು ಸಲ್ಲಿಸಬಹುದು.
Any Degree Pass
ಅಂತಿಮ ವರ್ಷದ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಸಂದರ್ಶನದ ವೇಳೆಗೆ ನಿಮ್ಮ ಫಲಿತಾಂಶ ಬಂದಿರಬೇಕು.
ಪದವಿ ಅದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ನೇಮಕಾತಿ ವಿಧಾನ
ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದರ ಮೂಲಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ ಮುಖ್ಯವಾಗಿ ಎರಡು ಹಂತಗಳನ್ನು ಒಳಗೊಂಡಿದೆ
-
- ಪೂರ್ವಭಾವಿ ಪರೀಕ್ಷೆ
-
- ಮುಖ್ಯ ಪರೀಕ್ಷೆ
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 1/4 ಋಣಾತ್ಮಕ ಅಂಕಗಳು ಇರುತ್ತವೆ.
ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಹೊಂದಲು ನಿರ್ದಿಷ್ಟ ಪಡಿಸಿದ ಅಂಕಗಳನ್ನು ಗಳಿಸಲೇಬೇಕು.
ಅರ್ಜಿ ಸಲ್ಲಿಸುವ ವಿಧಾನ
ಈ ಒಂದು ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕದ ವಿವರ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕ, ಅಂಗವಿಕಲ ಅಭ್ಯರ್ಥಿಗಳಿಗೆ : ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
OBC/General/EWS : 750 ರೂಪಾಯಿ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನೋಟಿಫಿಕೇಶನ್ ಲಿಂಕ್ ಕೆಳಗೆ ನೀಡಲಾಗಿದೆ