545 PSI Re-Exam Update 2023-24

545 PSI Re-Exam ಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಯ ಮರು ಪರೀಕ್ಷೆಯನ್ನು ಕೆಇಎ ಸ್ವತಂತ್ರ ಸಂಸ್ಥೆಯಿಂದ ನಡೆಸಲು ರಾಜ್ಯ ಸರ್ಕಾರ ಇದೀಗ ಆದೇಶವನ್ನು ಹೊರಡಿಸಲಾಗಿದೆ.

KEA ಯಿಂದ ಮರು ಪರೀಕ್ಷೆ

ಕರ್ನಾಟಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಸ್ವಾತಂತ್ರ್ಯ ಸಂಸ್ಥೆಯಾಗಿದ್ದು ಈಗಾಗಲೇ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ನಡೆಸುತ್ತಿದೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆಗಿರಬಹುದು, ಉಪನ್ಯಾಸಕರ ನೇಮಕಾತಿ, ಕರ್ನಾಟಕ ವಿದ್ಯುತ್ ಪ್ರಸರಣ ಇಲಾಖೆ ನೇಮಕಾತಿ, ಈ ಹಿಂದೆ ಪಿಡಿಒ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡ ನಡೆಸಲಾಗುತ್ತಿತ್ತು. ಆದರೆ ಈ ವರ್ಷದಿಂದ ಪಿಡಿಒ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ ಕೈಗೊಳ್ಳಲಿದೆ.

PSI ಪರೀಕ್ಷೆಯ ಅಕ್ರಮದ ಹಿನ್ನೆಲೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 2021 ಜನೆವರಿ 21ರಂದು ಈ ಒಂದು ನೇಮಕಾತಿಗೆ ಸಂಬಂಧಪಟ್ಟಂತೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅದೇ ರೀತಿಯಾಗಿ ಅಕ್ಟೋಬರ್ 3 2022 ರಂದು ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಹಿನ್ನೆಲೆಯಿಂದಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾದಾಗ ಅದರಲ್ಲಿ ಅಕ್ರಮ ಕಂಡು ಬಂದಾಗ ಸರ್ಕಾರ ಮರು ಪರೀಕ್ಷೆಗೆ ಆದೇಶವನ್ನು ನೀಡಲಾಗಿತ್ತು. ಇದನ್ನ ಖಂಡಿಸಿ ಅನೇಕ ಅಭ್ಯರ್ಥಿಗಳು ಹೈಕೋರ್ಟಿನ ಮೊರೆ ಹೊಕ್ಕರು ಈಗ ಹೈಕೋರ್ಟಿನ ಮುಖ್ಯ ಆದೇಶ ಹೊರಬಂದಿದ್ದು. ಮರು ಪರೀಕ್ಷೆಯನ್ನು ನಡೆಸಲು ಹೈಕೋರ್ಟ್ ಆದೇಶವನ್ನು ನೀಡಿದೆ. 

PSI Re-exam date announced

PSI Re-Exam ಯಾವಾಗ ?

ಈ ಒಂದು 545 ಪಿಎಸ್ಐ ಪರೀಕ್ಷೆಗಳಿಗೆ ಸಂಬಂಧಪಟ್ಟಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವಾಗ ನಡೆಸಲಾಗುತ್ತದೆ ಎಂಬುದಕ್ಕೆ ಕೆಇಎ ನ ಮುಖ್ಯ ಕಾರ್ಯದರ್ಶಿಯಾಗಿರುವ ಎಸ್ ರಮ್ಯಾ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದು

ಈಗ ತಾನೇ ಪಿಎಸ್ಐ ಪರೀಕ್ಷೆ ನಡೆಸಲು ಸರ್ಕಾರದಿಂದ ಆದೇಶ ಬಂದಿದ್ದು ಈ ಬಗ್ಗೆ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳಬೇಕಾಗಿದೆ ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ. ಅದೇ ರೀತಿಯಾಗಿ ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂತ್ರಿಗಳು ಜಿ ಪರಮೇಶ್ವರ ಅವರು ಕೂಡ ಅಭ್ಯರ್ಥಿಗಳಿಗೆ ಓದಲು ಕಾಲಾವಕಾಶ ನೀಡಲಾಗುತ್ತದೆ ಎಂಬುದನ್ನು ಕೂಡ ತಿಳಿಸಿದ್ದಾರೆ.

ಹಿಂದಿನ ಸರ್ಕಾರದ ಆದೇಶ ಮರು ಪರೀಕ್ಷೆಯನ್ನು ಖಂಡಿಸಿ ಅನೇಕ ಅಭ್ಯರ್ಥಿಗಳು ಕರ್ನಾಟಕ ಆಡಳಿತ ಮಂಡಳಿಗೆ ದೂರು ನೀಡಿದ್ದರು ಆಗ ಕರ್ನಾಟಕ ಆಡಳಿತ ಮಂಡಳಿ ಮರು ಪರೀಕ್ಷೆ ನಡೆಸುವಂತೆ ಆದೇಶ ನೀಡಲಾಗಿತ್ತು. ನಂತರ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೊಕ್ಕರು ಈಗ ಹೈಕೋರ್ಟ್ ಇಂದ ಮರು ಪರೀಕ್ಷೆ ನಡೆಸುವಂತೆ ಆದೇಶ ಬಂದಿದೆ ಈಗ ಸಾಕಷ್ಟು ಅಭ್ಯರ್ಥಿಗಳು ಮರು ಪರೀಕ್ಷೆ ನಡೆಯುವುದಿಲ್ಲ ಎನ್ನುವ ಭರವಸೆಯೊಂದಿಗೆ ಪರೀಕ್ಷಾ ತಯಾರಿ ನಡೆಸಿಲ್ಲ ಹೀಗಾಗಿ ಅವರಿಗೆ ಓದಲು ಕಾಲಾವಕಾಶ ನೀಡಲಾಗುತ್ತದೆ ಎಂದು ಗ್ರಹ ಸಚಿವರು ಭರವಸೆ ನೀಡಿದ್ದಾರೆ. 

ಅದೇ ರೀತಿಯಾಗಿ ಈ ಹಿಂದೆ ಆದ ಅಕ್ರಮಗಳು ಮರುಕಳಿಸದಂತೆ ಪಿಎಸ್ಐ ನೇಮಕಾತಿಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಈ ಬಾರಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಬದಲಾಗಿ ಸ್ವತಂತ್ರ ನೇಮಕಾತಿ ಸಂಸ್ಥೆಯಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ತೀರ್ಮಾನಿಸಲಾಗಿದೆ. 

23-12-2023 ರಂದು ನಡೆಸಲು ಉದ್ದೇಶಿಸಲಾಗಿದ್ದ 545 PSI ಹುದ್ದೆಗಳ ಮರು ಪರೀಕ್ಷೆಯನ್ನು ಕರ್ನಾಟಕ ರಾಜ್ಯ ಸರ್ಕಾರವು 23-01-2024ಕ್ಕೆ ನಡೆಸಲು ತೀರ್ಮಾನಿಸಲಾಗಿದೆ.

Latest

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ Karnataka Forest Guard ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಇದೀಗ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

Spread the Knowledge

One thought on “545 PSI Re-Exam Update 2023-24

Leave a Reply

Your email address will not be published. Required fields are marked *