Good News..! KPSC ಯಿಂದ 3000 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಸಿದ್ಧತೆ

KPSC ಯಿಂದ 3000 ಹುದ್ದೆಗಳ ಭರ್ತಿಗೆ ಮಹತ್ವದ ನಿರ್ಧಾರ

ರಾಜ್ಯದ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆ ನೀಗಿಸಲು ಕರ್ನಾಟಕ ಲೋಕಸೇವಾ ಆಯೋಗವು (KPSC) 2024ನೇ ಸಾಲಿನಲ್ಲಿ ಬರೋಬ್ಬರಿ 2000 ರಿಂದ 3000 ವರೆಗೂ ಹುದ್ದೆಗಳನ್ನು ಭರ್ತಿಮಾಡಲು ಸರ್ಕಾರ ಮುಂದಾಗಿದೆ.

2024 ರಲ್ಲಿ 30 ಇಲಾಖೆಗಳಿಗೆ ನಿರೀಕ್ಷಿತ ನೇಮಕಾತಿ ಯೋಜನೆಯನ್ನು ಪ್ರಕಟಿಸಲು ಪ್ರಸ್ತುತ ಸಿದ್ಧತೆಗಳು ನಡೆಯುತ್ತಿವೆ. ವಿವಿಧ ಹಂತಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು 30 ಇಲಾಖೆಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ.

” ಕೆಪಿಎಸ್‌ಸಿ ನೇಮಕ ಪ್ರಕ್ರಿಯೆ ಆರಂಭಿಸಿದ ಬಳಿಕ ಅರ್ಜಿ ಆಹ್ವಾನ, ಲಿಖಿತ ಪರೀಕ್ಷೆ , ಮುಖ್ಯ ಪರೀಕ್ಷೆ, ಆಯ್ಕೆ ಪಟ್ಟಿ ಹೀಗೆ ವಿವಿಧ ಪ್ರಕ್ರಿಯೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ” 

ಎಸ್.ಲತಾಕುಮಾರಿ, ಕೆಪಿಎಸ್‌ಸಿ ಕಾರ್ಯದರ್ಶಿ

ಸರಕಾರದ ಸುಗಮ ಕಾರ್ಯನಿರ್ವಹಣೆಗೆ ಕಂದಾಯ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸೇರಿದಂತೆ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವ ಅಗತ್ಯವಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ಉದ್ಯೋಗದ ಅಗತ್ಯವಿದೆ. ಆದ್ದರಿಂದ, ಇಲಾಖೆಗಳು ಈಗಾಗಲೇ ಕೆಪಿಎಸ್‌ಸಿಗೆ ನೇಮಕಾತಿ ಪ್ರಸ್ತಾಪಗಳನ್ನು ಕಳುಹಿಸಿವೆ.

ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆ
ನಿಗಮ, ಮಂಡಳಿ, ವಿವಿ ಗ್ರೂಪ್ ಬಿ ಗ್ರೂಪ್ ಸಿ
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 50 14
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ 00 100
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ 41 00
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ 286 336
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ 00 2,503
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 00 36
ರಾಜೀವ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 06 38

ಸಂಪೂರ್ಣ ನೇಮಕಾತಿ ವೇಳಾಪಟ್ಟಿಯನ್ನು ಸಿಕ್ಕರೆ, ಸರ್ಕಾರಿ ಉದ್ಯೋಗದ ಅಭ್ಯರ್ಥಿಗಳು ಶಿಕ್ಷಣ ಮತ್ತು ಅಭ್ಯಾಸ ಸೇರಿದಂತೆ ಅವರ ಅರ್ಹತೆಗಳ ಆಧಾರದ ಮೇಲೆ ಉದ್ಯೋಗಗಳಿಗೆ ಸಿದ್ಧರಾಗಲು ಸಹಾಯವಾಗುತ್ತದೆ. ಮತ್ತೊಂದೆಡೆ, ಆಯೋಗವು ವೇಳಾಪಟ್ಟಿಯನ್ನು ಸಹ ನಿಗದಿಪಡಿಸುವುದರಿಂದ, ಅರ್ಜಿಗಳನ್ನು ಕರೆಯುವುದು, ಪರೀಕ್ಷೆ, ಫಲಿತಾಂಶ, ಶಾರ್ಟ್‌ಲಿಸ್ಟ್ ಮಾಡುವುದು ಇತ್ಯಾದಿ ಚಟುವಟಿಕೆಗಳನ್ನು ನಿರ್ವಹಿಸುವ ಜವಾಬ್ದಾರಿ ಇದೆ. ವೇಳಾಪಟ್ಟಿಯ ಪ್ರಕಾರ ಹೆಚ್ಚುವರಿಯಾಗಿ, ಆಯೋಗವು ಎಸ್‌ಎಸ್‌ಸಿ ಮಾದರಿಯಲ್ಲಿ ಡೇಟ್‌ ಶೀಟ್ ಅನ್ನು ಪ್ರಕಟಿಸಲು ಪ್ರಸ್ತಾಪಿಸಿದೆ.

Spread the Knowledge

One thought on “Good News..! KPSC ಯಿಂದ 3000 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಸಿದ್ಧತೆ

Comments are closed.