ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ Karnataka Forest Guard ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಇದೀಗ ಹೊಸ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಈ ಒಂದು ನೇಮಕಾತಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ನೀಡಲಾಗಿದೆ.
Karnataka Forest Guard | ನೇಮಕಾತಿಯ ಸಂಪೂರ್ಣ ವಿವರಗಳು
ನೇಮಕಾತಿ ವಿವರ | ಮಾಹಿತಿ |
ಹುದ್ದೆಯ ಹೆಸರು | ಅರಣ್ಯ ರಕ್ಷಕ |
ಉದ್ಯೋಗದ ಸ್ಥಳ | ಕರ್ನಾಟಕ |
ಒಟ್ಟು ಹುದ್ದೆಗಳು | 540 Post |
ಅರ್ಹತೆ | 1. ಕರ್ನಾಟಕದ ಅಭ್ಯರ್ಥಿಯಾಗಿರಬೇಕು 2. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು ಮತ್ತು ಯಾವುದೇ ದೇಹದ ನೂನ್ಯತೆಗಳಿರಬಾರದು. |
ವಿದ್ಯಾರ್ಹತೆ | ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿರಬೇಕು. ಡಿಪ್ಲೋಮಾ ಮತ್ತು ಐ.ಟಿ.ಐ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಪಿಯುಸಿಗೆ ತತ್ಸಮಾನ ಇರುವ ಪ್ರಮಾಣ ಪತ್ರ ಹಾಜರುಪಡಿಸಬೇಕು. |
ವಯೋಮಿತಿ | ಕನಿಷ್ಠ ವಯೋಮಿತಿ 18 ವರ್ಷ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 27 ವರ್ಷ ಹಿಂದುಳಿದ ಅಭ್ಯರ್ಥಿಗಳಿಗೆ : 30 ವರ್ಷ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೆಟಗರಿ ೧ ಅಭ್ಯರ್ಥಿಗಳಿಗೆ : 32 ವರ್ಷ ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ಸೇವಾ ಅವಧಿ ಜೊತೆಗೆ 3 ವರ್ಷ |
ವೇತನ | 23500-47560 |
ಅರ್ಜಿಸಲ್ಲಿಸುವ ವಿಧಾನ | Online |
ನೋಟಿಫಿಕೇಶನ್ | Click Here |
Apply Link | Click Here |
FAQ | ಇತ್ತೀಚಿಗೆ ಕೇಳಲಾದ ಪ್ರಶ್ನೆಗಳು |
ಪ್ರಮುಖ ದಿನಾಂಕಗಳು
ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ | 01-12-2023 |
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ | 30-12-2023 |
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 05-01-2024 |
ಪಿಯುಸಿಗೆ ತತ್ಸಮಾನ ಇರುವ ವಿದ್ಯಾರ್ಹತೆಗಳು
-
- CBSC and ICSC Class 12TH
-
- 3 Years Diploma and 2 Years ITI
-
- ಇತರೆ ರಾಜ್ಯ ಸರ್ಕಾರದ ಪರೀಕ್ಷಾ ಮಂಡಳಿಗಳು ನಡೆಸುವ ಕ್ಲಾಸ್ 12TH
ಡಿಪ್ಲೋಮಾ ಮತ್ತು ಐಟಿಐ ಅಭ್ಯರ್ಥಿಗಳು ಅರ್ಹರೆ
ಮೂರು ವರ್ಷದ ಡಿಪ್ಲೋಮಾ ಮತ್ತು ಎರಡು ವರ್ಷದ ಐಟಿಐ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಅವರು ಪಿಯುಸಿಗೆ ತತ್ಸಮಾನ ಇರುವ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕಾಗುತ್ತದೆ.
ತತ್ಸಮಾನ ಪ್ರಮಾಣ ಪತ್ರ ಹೇಗೆ ಪಡೆಯುವುದು ?
ಮೂರು ವರ್ಷದ ಡಿಪ್ಲೋಮಾ ಮತ್ತು ಎರಡು ವರ್ಷದ ITI ಅಭ್ಯರ್ಥಿಗಳು NIOS ವತಿಯಿಂದ ನಡೆಸಲಾಗುವ ಒಂದು ವಿಷಯದಲ್ಲಿ ಮತ್ತು ಒಂದು ಭಾಷಾ ವಿಷಯದಲ್ಲಿ ಪಾಸಾಗಿರುವ ಪ್ರಮಾಣ ಪತ್ರ ಹಾಜರುಪಡಿಸಬೇಕು ಅಥವಾ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದ ಪಿಯುಸಿಗೆ ತತ್ಸಮಾನ ಇರುವ ಪ್ರಮಾಣ ಪತ್ರ ಹಾಜರುಪಡಿಸಬೇಕು.
ಅರ್ಜಿಯನ್ನು ಸಲ್ಲಿಸುವ ವಿಧಾನ | How to Apply
ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವುದರ ಮೂಲಕ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬಹುದು ಆನ್ಲೈನ್ ಹೊರತುಪಡಿಸಿ ಯಾವುದೇ ರೀತಿ ಅರ್ಜಿಯನ್ನು ಸಲ್ಲಿಸಲು ಅವಕಾಶಗಳು ಇರುವುದಿಲ್ಲ.
ಅರ್ಜಿ ಶುಲ್ಕದ ಪಾವತಿ ವಿಧಾನ
ಅಭ್ಯರ್ಥಿಗಳು ತಾವು ಈ ಒಂದು ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಚಲನ್ ಅನ್ನು ತೆಗೆದುಕೊಂಡು ಆ ಒಂದು ಚಲನ್ ಪ್ರತಿಯನ್ನು ನಿಗದಿತ ಅರ್ಜಿ ಶುಲ್ಕದೊಂದಿಗೆ ಮತ್ತು ಇಲಾಖೆ ನಿಗದಿಪಡಿಸಿದ ಸೇವಾ ಶುಲ್ಕದೊಂದಿಗೆ ನಿಮ್ಮ ಹತ್ತಿರದ ಇ ಪಾವತಿ ವ್ಯವಸ್ಥೆ ಇರುವ ಅಂಚೆ ಕಚೇರಿಯಲ್ಲಿ ಕೆಲಸದ ದಿನಗಳಲ್ಲಿ ಪಾವತಿಸಬೇಕು.
ಒಮ್ಮೆ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ
ಅರ್ಜಿ ಶುಲ್ಕವನ್ನು ಅಂಚೆ ಕಚೇರಿಯ ಕೆಲಸದ ಅವಧಿಯಲ್ಲಿ ಪಾವತಿಸಬೇಕು
ನಿಗದಿತ ಸಮಯಕ್ಕೆ ಸರಿಯಾಗಿ ಅರ್ಜಿ ಶುಲ್ಕವನ್ನು ಪಾವತಿ ಮಾಡದೇ ಇರುವ ಅರ್ಜಿಗಳನ್ನು ಇಲಾಖೆ ತಿರಸ್ಕರಿಸಲಾಗುತ್ತದೆ.
ಅರ್ಜಿ ಶುಲ್ಕದ ವಿವರಗಳು
ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ
ಪುರುಷ ಅಭ್ಯರ್ಥಿಗಳಿಗೆ : 200+20 ಸೇವಾ ಶುಲ್ಕ
ಮಹಿಳಾ ಅಭ್ಯರ್ಥಿಗಳಿಗೆ : 100+20 ಸೇವಾ ಶುಲ್ಕ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೆಟಗರಿ 1 ಅಭ್ಯರ್ಥಿಗಳಿಗೆ
ಪುರುಷ ಅಭ್ಯರ್ಥಿಗಳಿಗೆ : 100+20 ಸೇವಾ ಶುಲ್ಕ
ಮಹಿಳಾ ಅಭ್ಯರ್ಥಿಗಳಿಗೆ : 50+20 ಸೇವಾ ಶುಲ್ಕ
ನೇಮಕಾತಿಯ ಅಪ್ಡೇಟ್ ಎಲ್ಲಿ ಪಡೆಯುವುದು ?
ಈ ಒಂದು ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://aranya.gov.in ಅಥವಾ https://kfdrecruitment.in ಈ ಒಂದು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವುದರ ಮೂಲಕವಾಗಿ ನೇಮಕಾತಿಗೆ ಸಂಬಂಧಪಟ್ಟ ಯಾವುದೇ ಹೊಸ ಮಾಹಿತಿಯ ಅಪ್ಡೇಟ್ ಅಭ್ಯರ್ಥಿಗಳು ಪಡೆಯಬಹುದು.
ಆಯ್ಕೆಯ ಹಂತಗಳು
ಈ ಒಂದು ಅರಣ್ಯ ರಕ್ಷಕ ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ ನೇಮಕಾತಿ ವಿಧಾನವು ಹಲವಾರು ಹಂತಗಳನ್ನು ಒಳಗೊಂಡಿದೆ.
Selection Process Steps
Step 1
ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ತಾವು ಪಿಯುಸಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 20 ಅಭ್ಯರ್ಥಿಗಳಂತೆ (1:20 Ratio) Physical ಗೆ ಕರೆಯಲಾಗುತ್ತದೆ. ಈ ಒಂದು ಹಂತದಲ್ಲಿ ಅಭ್ಯರ್ಥಿಗಳಿಗೆ Physical Standard Test ನಡೆಸಲಾಗುತ್ತದೆ.
Step 2
Physical Standard Test ಆದ ನಂತರ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ ಈ ಒಂದು ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಯಾವುದಾದರೂ ನ್ಯೂನ್ಯತೆಗಳು ಇವೆಯೇ ಎಂಬುದನ್ನ ಪರೀಕ್ಷೆ ಮಾಡಲಾಗುತ್ತದೆ.
-
- ಅಭ್ಯರ್ಥಿಗಳಿಗೆ ದೃಷ್ಟಿಯ ಪರೀಕ್ಷೆ
-
- ಅಭ್ಯರ್ಥಿಗಳ ಶ್ರವಣ ಶಕ್ತಿ ಪರೀಕ್ಷೆ ( ಅಭ್ಯರ್ಥಿಗಳ ಕೇಳುವ ಸಾಮರ್ಥ್ಯ)
Step 3
-
- Physical Endurance Test
-
- Physical Efficiency Test
Step 4
- 100 Marks Aptitude Exam
- All Question MCQ
- 0.25 Negative Mark
Final Selection
ಅಭ್ಯರ್ಥಿಗಳು ಪಿಯುಸಿಯಲ್ಲಿ ಪಡೇದ ಅಂಕದ ಶೇ 50% ರಷ್ಟು ಅಂಕ ಮತ್ತು ಇಲಾಖೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೇಯುವ ಅಂಕದ ಶೇ 50% ಅಷ್ಟು ಅಂಕ ಸೇರಿಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ ನಂತರ ದಾಖಲಾತಿ ಪರೀಶಿಲನೆ ಆದ ನಂತರ Final List ಬಿಡುಗಡೆ ಮಾಡಿ ಆಯ್ಕೆ ಮಾಡಿಕೋಳ್ಳುತ್ತಾರೆ. ಮುಖ್ಯವಾಗಿ ಈ ಒಂದು ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಅಂತಿಮ ಆಯ್ಕೆ ಪಟ್ಟಿಯನ್ನು ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸುದರಿಂದ ಆಗಾಗ ವೆಬ್ಸೈಟ್ ಅನ್ನು ಪರಿಶೀಲಿಸಬೇಕು.
Recent Recruitments
ಇತ್ತೀಚಿಗೆ ಕೇಂದ್ರ ಸರ್ಕಾರದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪಡೆಯಲು ಕೆಳಗೆ ನೀಡಲಾದ ಲಿಂಕ ಮೇಲೆ ಕ್ಲಿಕ್ ಮಾಡಿ