CTI ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಲು ಸಮಸ್ಯೆ ಎದುರಾಗುತ್ತಿದೆಯೇ? | CTI Hall Ticket 2024 Problem

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ 2024 ಜನವರಿ 6th & 7th ನಡೆಯಲಿರುವ 15 ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ (CTI) ಹುದ್ದೆಗಳ ನೇಮಕಾತಿಗೆ ಸಂಬಂಧಪಟ್ಟಂತೆ (CTI Hall Ticket) “ಪ್ರವೇಶ ಪತ್ರವನ್ನು” ಆಯೋಗದ ವೆಬ್ ಸೈಟ್ https://kpsc.kar.nic.in/ ರಲ್ಲಿ ದಿನಾಂಕ : 02-01-2024 ರಿಂದ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಅಭ್ಯರ್ಥಿಗಳು ನೊಂದಣಿ ಮಾಡಿದ ಮೊಬೈಲ್ ನಂಬರ್, ಈ-ಮೇಲ್ ಐಡಿ ಅಥವಾ Enrolment Number ಇವುಗಳಲ್ಲಿ ಯಾವುದಾದರು ಒಂದನ್ನು ನಮೂದಿಸಿ ಲಾಗಿನ್ ಮಾಡಿ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿರುತ್ತೆ.

ಪರೀಕ್ಷಾ ಕೇಂದ್ರ ಹಂಚಿಕೆ ಮಾಡುವಲ್ಲಿ 2 ದಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನೀಡಲಾಗಿದೆ ಮತ್ತು ಕೆಲವರಿಗೆ ಕಡ್ಡಾಯ ಕನ್ನಡ ನಮೂದೇ ಆಗಿರುವುದಿಲ್ಲ. ಇದರಿಂದ ಹಲವಾರು ಅಭ್ಯರ್ಥಿಗಳಿಗೆ ತೊಂದರೆ ಉಂಟಾಗಿದೆ.

CTI Hall Ticket Download Problem

ಆಯೋಗದಿಂದ ಪ್ರಥಮ ಬಾರಿಗೆ KPSC Udyoga Software ಅನ್ನು ಅಭಿವೃದ್ಧಿ ಪಡಿಸಲಾಗಿದ್ದು, ಸದರಿ ಪರೀಕ್ಷೆಯು ಈ ತಂತ್ರಾಂಶದ ಮೂಲಕ ನಡೆಸಲಾಗುತ್ತಿರುವ ಪ್ರಥಮ ಪರೀಕ್ಷೆಯಾಗಿರುತ್ತದೆ. ಆದ್ದರಿಂದ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾದಲ್ಲಿ Help Line ಸಂಖ್ಯೆ: 080-22200090, 22346487, 30574901, 30574957 ಅನ್ನು ಸಂಪರ್ಕಿಸಬಹುದು ಹಾಗೂ ctipending@gmail.com ಗೆ ಮೇಲ್ ಮಾಡಬಹುದು.

Spread the Knowledge

One thought on “CTI ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಲು ಸಮಸ್ಯೆ ಎದುರಾಗುತ್ತಿದೆಯೇ? | CTI Hall Ticket 2024 Problem

Comments are closed.