ಕೆಪಿಸಿಎಲ್ ಹುದ್ದೆಗಳಿಗೆ ಪಠ್ಯಕ್ರಮ ಬಿಡುಗಡೆ – KPCL Recruitment Syllabus

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ವಿದ್ಯುತ್ ನಿಗಮ (KPCL) ನಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಂದಿನ ತಿಂಗಳು ಅಂದರೆ (18-02-2024) ಫೆಬ್ರವರಿಯಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಅಸಿಸ್ಟಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್, ಕೆಮಿಸ್ಟ್‌ ಮತ್ತು ಕೆಮಿಕಲ್ ಸೂಪರ್‌ವೈಸರ್‌ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಲಿಖಿತ ಪರೀಕ್ಷೆಯನ್ನು ನಡೆಸುತ್ತಿರುವುದು.

ಈ ಒಂದು ಲಿಖಿತ ಪರೀಕ್ಷೆಗೆ ಪಠ್ಯಕ್ರಮ (Syllabus) ವನ್ನು KEA ಬಿಡುಗಡೆ ಮಾಡಿದ್ದು, ಹುದ್ದೆವಾರು ಪಠ್ಯಕ್ರಮ ಮಾಹಿತಿ ಈ ಕೆಳಗಿನಂತಿದೆ.

Post Disciplines Syllabus
ಅಸಿಸ್ಟಂಟ್ ಇಂಜಿನಿಯರ್ ಸಿವಿಲ್ / ಇಲೆಕ್ಟ್ರಿಕಲ್/ ಮೆಕ್ಯಾನಿಕಲ್ / ಇನ್‌ಸ್ಟ್ರುಮೆಂಟೇಶನ್ಲ್ VTU-2010 ರ ಆಯಾ B.E ಶಾಖೆಯ ಪಠ್ಯಕ್ರಮದ ಪ್ರಕಾರ ನಿಗದಿಪಡಿಸಲಾಗಿದೆ.
ಜೂನಿಯರ್ ಇಂಜಿನಿಯರ್ ಸಿವಿಲ್ / ಇಲೆಕ್ಟ್ರಿಕಲ್/ ಮೆಕ್ಯಾನಿಕಲ್ ಆಯಾ ವಿಭಾಗಕ್ಕೆ ಸಂಬಂಧಿಸಿದ ವಿಷಯಗಳ Dept of Technical Education (DTE)-2010 ಡಿಪ್ಲೊಮಾ ಶಾಖೆಯ ಪಠ್ಯಕ್ರಮದ ಪ್ರಕಾರ ನಿಗದಿಸಲಾಗಿದೆ.
ಕೆಮಿಸ್ಟ್‌ - ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಸಮಾನವಾಗಿ M.Sc ಕೆಮಿಸ್ಟ್ರಿ/ ಅಪ್ಲೈಡ್ ಕೆಮಿಸ್ಟ್ರಿ ಪಠ್ಯಕ್ರಮದ ಪ್ರಕಾರ ನಿಗದಿಸಲಾಗಿದೆ.
ಕೆಮಿಕಲ್ ಸೂಪರ್‌ವೈಸರ್ - ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಸಮಾನವಾಗಿ B.Sc ಕೆಮಿಸ್ಟ್ರಿ ಪಠ್ಯಕ್ರಮದ ಪ್ರಕಾರ ಅಳವಡಿಸಲಾಗಿದೆ.

ಪ್ರವೇಶ ಪತ್ರವನ್ನು ಪರೀಕ್ಷೆಗೆ 1 ರಿಂದ 2 ವಾರಗಳ ಮೊದಲು ನೀಡಲಾಗುತ್ತದೆ. ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಮೇಲಿನ ಪಠ್ಯಕ್ರಮವನ್ನು ಪರಿಗಣಿಸಿ ತಯಾರಿ ನಡೆಸಬೇಕು.

Spread the Knowledge

One thought on “ಕೆಪಿಸಿಎಲ್ ಹುದ್ದೆಗಳಿಗೆ ಪಠ್ಯಕ್ರಮ ಬಿಡುಗಡೆ – KPCL Recruitment Syllabus

Comments are closed.