KEA ಯಿಂದ 5,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ!

KEA ಯಿಂದ 5,000ಕ್ಕೂ ಅಧಿಕ ಹುದ್ದೆಗಳು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ದಿಂದ 5,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ. ಕರ್ನಾಟಕ ರಾಜ್ಯದಲ್ಲಿ ವಿವಿಧ ಸಂಸ್ಥೆಗಳಲ್ಲಿ ಇರುವಂತಹ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ನೇರ ನೇಮಕಾತಿಯನ್ನ ನಡೆಸಲಾಗುವುದು. ಇದು ಸಹ ಸ್ಪರ್ಧಾತ್ಮಕ ಪರೀಕ್ಷಾ ಮೂಲಕದಿಂದ ನಡೆಸಲಾಗುವುದು.

(೧) ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, (೨) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, (೩)ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ (೪) ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, (೫) ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (೬) ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಸಂಸ್ಥೆಗಳಲ್ಲಿ ಖಾಲಿ ಇರುವ ಮಿಕ್ಕುಳಿದ ವೃಂದ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ (ಸ್ಥಳೀಯ) ವೃಂದದ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ವಿವರವಾದ ಅಧಿಸೂಚನೆಯನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.

KEA Recruitment 2024 :

ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಂಸ್ಥೆವಾರು ವೃಂದ ಹಾಗೂ ಒಟ್ಟು ಹುದ್ದೆಗಳ ವಿವರಗಳು ಈ ಕೆಳಗಿನಂತೆ ನೀಡಲಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ :

ಸಹಾಯಕ ಇಂಜಿನಿಯರ್ (ಸಿವಿಲ್) – 50
ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್-ಸಿ) – 14

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ :

ನಿರ್ವಾಹಕ – 2500
ಸಹಾಯಕ ಲೆಕ್ಕಿಗ – 1
ಸ್ಪ್ಯಾಫ್ ನರ್ಸ – 1
ಫಾರ್ಮಸಿಸ್ಟ್ – 1

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ :

ಸಹಾಯಕ ಗ್ರಂಥಪಾಲಕ – 1
ಜೂನಿಯರ್ ಪ್ರೋಗ್ರಾಮರ್ – 5
ಸಹಾಯಕ ಇಂಜಿನಿಯ‌ರ್ – 1
ಸಹಾಯಕ – 12
ಕಿರಿಯ ಸಹಾಯಕ – 25

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ :

ಸಹಾಯಕ ಆಡಳಿತಾಧಿಕಾರಿ (ದರ್ಜೆ-2) – 3
ಸಹಾಯಕ ಲೆಕ್ಕಾಧಿಕಾರಿ – 2
ಸಹಾಯಕರ ಅಂಕಿಸಂಖ್ಯಾಧಿಕಾರಿ – 1
ಸಹಾಯಕ ಉಗ್ರಾಣಾಧಿಕಾರಿ – 2
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ – 7
ಸಹಾಯಕ ಕಾನೂನು ಅಧಿಕಾರಿ – 7
ಸಹಾಯಕ ಅಭಿಯಂತರು (ಕಾಮಗಾರಿ) -1
ಸಹಾಯಕ ತಾಂತ್ರಿಕ ಶಿಲ್ಪಿ – 11
ಸಹಾಯಕ ಸಂಚಾರ ವ್ಯವಸ್ಥಾಪಕ – 11
ಕಿರಿಯ ಅಭಿಯಂತರರು (ಕಾಮಗಾರಿ) – 5
ಕಿರಿಯ ಅಭಿಯಂತರರು (ವಿದ್ಯುತ್‌) – 8
ಗಣಕ ಮೇಲ್ವಿಚಾರಕ – 14
ಸಂಚಾರ ನಿರೀಕ್ಷಕ – 18
ಚಾರ್ಜ್‌ಮನ್ – 52
ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3) – 28
ಕುಶಲ ಕರ್ಮಿ (ದರ್ಜೆ-3) – 80
ತಾಂತ್ರಿಕ ಸಹಾಯಕ (ದರ್ಜೆ-3) – 500

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ :

ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ) (ಗ್ರೂಪ್-ಬಿ) – 6
ಅಧಿಕಾರಿ (ಲೆಕ್ಕಪತ್ರ) (ಗ್ರೂಪ್-ಬಿ) – 1
ಕಿರಿಯ ಅಧಿಕಾರಿ ಕ್ಯೂಎಡಿ – 2
ಕಿರಿಯ ಅಧಿಕಾರಿ (ಆರ್&ಡಿ) – 1
ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ) – 2
ಕಿರಿಯ ಅಧಿಕಾರಿ (ಸಾಮಗ್ರಿ ಉಗ್ರಾಣ ವಿಭಾಗ) – 2
ಉಪ ಪ್ರಾಧನ ವ್ಯವಸ್ಥಾಪಕರು (ಮಾರುಕಟ್ಟೆ) (ಗ್ರೂಪ್-ಎ) – 1
ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) (ಗ್ರೂಪ್-ಎ) – 1
ನಿರ್ವಾಹಕರು (ಮಾರುಕಟ್ಟೆ) (ಗ್ರೂಪ್-ಎ) – 1
ಅಧಿಕಾರಿ (ಮಾರುಕಟ್ಟೆ) (ಗ್ರೂಪ್-ಬಿ) – 2
ಕಿರಿಯ ಅಧಿಕಾರಿ (ಮಾರುಕಟ್ಟೆ) (ಗ್ರೂಪ್-ಸಿ) – 1
ಮಾರಾಟ ಪ್ರತಿನಿಧಿ(ಮಾರುಕಟ್ಟೆ) (ಗ್ರೂಪ್-ಸಿ) – 4
ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) (ಗ್ರೂಪ್-ಸಿ) – 3
ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) (ಗ್ರೂಪ್-ಡಿ) – 11

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ :

ಸಹಾಯಕ ಲೆಕ್ಕಿಗ – 15
ನಿರ್ವಾಹಕ – 1737

ಸೂಚನೆ: ಮೇಲ್ಕಂಡ ಹುದ್ದೆಗಳ ಸಂಖ್ಯೆ ಹಾಗೂ ವೃಂದ ತಾತ್ಕಾಲಿಕವಾಗಿದ್ದು, ಬದಲಾವಣೆಯ ಷರತ್ತಿಗೆ ಒಳಪಟ್ಟಿರುತ್ತದೆ.
Spread the Knowledge

2 thoughts on “KEA ಯಿಂದ 5,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ!

Comments are closed.