Karnataka Revenue Law Information in Kannada

ಕಂದಾಯ ಕಾನೂನು (ರೆವಿನ್ಯೂ ಲಾ)

ಗ್ರಾಮ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಂದಾಯ ಕಾನೂನು ಈ ಒಂದು ವಿಷಯದ ಮೇಲೆ ಸುಮಾರು 25 ಪ್ರಶ್ನೆಗಳನ್ನು ಕೇಳಲಾಗುತ್ತದೆ  ಹಾಗಾದರೆ ಈ ಒಂದು ಕಂದಾಯ ಕಾನೂನು ಎಂದರೇನು? ಕಂದಾಯ ಅಧಿಕಾರಿಗಳ ಕೆಲಸ ಏನು ಇರುತ್ತೆ? ಕಂದಾಯ ಅಧಿಕಾರಿಗಳ ಹಕ್ಕು ಮತ್ತು ಕರ್ತವ್ಯಗಳು ಮತ್ತು ಅವರ ಜವಾಬ್ದಾರಿ ಏನು? ಪ್ರಮುಖವಾಗಿ ಒಂದು ಗ್ರಾಮ ಮಟ್ಟದಲ್ಲಿ ಆಡಳಿತ ಯಾವ ರೀತಿ ನಡೆಯುತ್ತದೆ ಎಂಬುದನ್ನ ಸಂಪೂರ್ಣವಾಗಿ ತಿಳಿದುಕೊಳ್ಳೋಣ. 

ಭೂ ಕಂದಾಯ ಅಧಿನಿಯಮ ೧೯೬೪

ಇದು 1964 ಭೂಕಂದಾಯ ಅಧಿನಿಯಮ ಕರ್ನಾಟಕಕ್ಕೆ ಸಂಬಂಧಿಸಿದೆ. ಇದು ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸುವ ಅಧಿಸೂಚನೆಯ ಮೂಲಕ ಜಾರಿಗೆ ಬರುತ್ತದೆ. ಪ್ರಮುಖವಾಗಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಸಂಬಂಧಿಸಿದಂತೆ ಪ್ರಮುಖವಾಗಿ ಈ  ಒಂದು ಕಂದಾಯ ಕಾನೂನಿನಲ್ಲಿ ಕೆಲವೊಂದಿಷ್ಟು ಆಡಳಿತ ವಿಷಯಕ್ಕೆ ಸಂಬಂಧಿಸಿದಂತ ಪದಗಳನ್ನ ತಿಳಿದುಕೊಳ್ಳುವುದು ಮಹತ್ವದ್ದಾಗಿರುತ್ತೆ.

ಕಂದಾಯ ಕಾನೂನಿಗೆ ಸಂಬಂಧಿಸಿದ ವಿವಿಧ ಪರಿಭಾಷೆಗಳು : ಕಟ್ಟಡ ಮತ್ತು ನಿವೇಶನ,  ವರ್ಗಾವಣೆ ಮಾಡಿದ, ಎಲ್ಲೆ ಗುರುತು, ಪ್ರಾಮಾಣಿಕೃತ ನಕಲು,  ಚಾವಡಿ,  ನಗರ, ಭೂಮಿ ವರ್ಗ,  ಭೂಮಾಲಿಕ,  ಸ್ಥಳೀಯ ಪ್ರಾಧಿಕಾರ, ಗೇಣಿ, ಗೇಣಿಯ ಮೌಲ್ಯ,  ಮೌಲ್ಯ ಕಂದಾಯ ವ್ಯವಸ್ಥೆ, ಮತ್ತು ಗ್ರಾಮ ಆಡಳಿತಕ್ಕೆ ಸಂಬಂಧಿಸಿದ ವಿವಿಧ ಪರಿಭಾಷೆಗಳ ಪದಗಳ ಅರ್ಥ ಗೊತ್ತಿರಬೇಕು.

ರೆವಿನ್ಯೂ ಅಧಿಕಾರಿಗಳು ಎಂದರೆ ಯಾರು ಅವರ ಹಕ್ಕು ಮತ್ತು ಕರ್ತವ್ಯಗಳೇನು ?

ರೆವೆನ್ಯೂ ಅಧಿಕಾರಿಗಳನ್ನು ಯಾವ ರೀತಿ ನೇಮಕಾತಿ ಮಾಡಿಕೊಡಲಾಗುತ್ತದೆ ಮತ್ತು ಅವರ ಅಧಿಕಾರಗಳೇನು ? ಪ್ರಮುಖವಾಗಿ ರೆವಿನ್ಯೂ ಅಧಿಕಾರಿಗಳ ವ್ಯಾಪ್ತಿ ಏನು ಹಕ್ಕು ಮತ್ತು ದಾಖಲೆಗಳ ನೀಡುವುದು ಭೂಕಂದಾಯ ಮತ್ತು ಒಂದು ಗ್ರಾಮದ ಆಡಳಿತದಲ್ಲಿ ಯಾವ ಯಾವ ವಿಷಯಗಳನ್ನು ನೋಡುತ್ತೇವೆ ಎಂಬುದು ಇಲ್ಲಿ ಮುಖ್ಯವಾಗಿರುತ್ತದೆ.

ಒಂದು ರಾಜ್ಯವನ್ನ ಪ್ರದೇಶವನ್ನಾಗಿ ಪ್ರದೇಶವನ್ನ ಜಿಲ್ಲೆಗಳಾಗಿ ಜಿಲ್ಲೆಗಳಲ್ಲಿ ಹೋಬಳಿಗಳು ಮತ್ತು ಗ್ರಾಮಗಳನ್ನು ಒಳಗೊಂಡ ತಾಲೂಕು ಇರುತ್ತವೆ. 

 

ರೀಜನಲ್ ಕಮಿಷನರ್ ನೇಮಕ ಯಾವ ರೀತಿ ಆಗುತ್ತದೆ,  ಉಪ ಕಮಿಷನರ್,  ಅಸಿಸ್ಟೆಂಟ್ ಕಮಿಷನರ್,  ತಹಶೀಲ್ದಾರ್ ವಿಶೇಷ ತಹಶೀಲ್ದಾರ್ ರೆವೆನ್ಯೂ ಇನ್ಸ್ಪೆಕ್ಟರ್ ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮ  ಲೆಕ್ಕಾಧಿಕಾರಿ ಈ ಹುದ್ದೆಗಳ ಅಧಿಕಾರಗಳ ಬಗ್ಗೆ ಜ್ಞಾನವಿರಬೇಕು.

ಈ ಒಂದು ಕಂದಾಯ ಕಾನೂನಿನಲ್ಲಿ ಮುಖ್ಯವಾಗಿ ಓದಬೇಕಾದ ವಿಷಯಗಳು

  • ಭೂಮಿ ಮತ್ತು  ಭೂಕಂದಾಯ
  • ರೆವೆನ್ಯೂ ಅಧಿಕಾರಿಗಳ ವ್ಯಾಪ್ತಿ 
  • ಕರ್ನಾಟಕದಲ್ಲಿ ಭೂ ಕಂದಾಯ ವ್ಯವಸ್ಥೆ
  • ಭೂಕಂದಾಯ ಮತ್ತು ಇತರೆ ತಗಾದೆಗಳ ವಸೂಲಾತಿ
  • ಭೂಮಿಯ ಮೋಜಣಿ ಮತ್ತು ಎಲ್ಲೆ ಗುರುತುಗಳ ವಿವಾದ ಇತ್ಯರ್ಥ 
  • ಇತರೆ ಭೂ ಕಂದಾಯ ವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳು
Spread the Knowledge