BBMP Recruitment 2024 : 444 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( BBMP Recruitment 2024) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 444 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಖಾಲಿ ಇರುವ ಹುದ್ದೆಗಳಲ್ಲಿ ಬಯೋಮೆಡಿಕಲ್ ಇಂಜಿನಿಯರ್, ಸ್ಟಾಫ್ ನರ್ಸ್, PHCO (ANM), ರೇಡಿಯಾಲಜಿಸ್ಟ್ ಪೋಸ್ಟ್‌ಗಳು ಸೇರಿವೆ. ನೇಮಕಾತಿಯ ಅರ್ಹತಾ ಮಾನದಂಡಗಳು ನಿರ್ದಿಷ್ಟ ಹುದ್ದೆಗಳನ್ನು ಅವಲಂಬಿಸಿ ಬದಲಾಗಬಹುದು, ಈ ನೇಮಕಾತಿ ಯನ್ನು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನಡೆಸಲಾಗುತ್ತಿದೆ.

ಮಹತ್ವಾಕಾಂಕ್ಷಿ ಅಭ್ಯರ್ಥಿಗಳು ಅಧಿಕೃತ BBMP ವೆಬ್‌ಸೈಟ್, bbmp.gov.in ನಲ್ಲಿ ಖಾಲಿ ಹುದ್ದೆಗಳು, ಅಪ್ಲಿಕೇಶನ್ ವಿಧಾನ ಮತ್ತು ಆಯ್ಕೆ ಪ್ರಕ್ರಿಯೆಯ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಬಹುದು.

BBMP Recruitment 2024

ಸಂಸ್ಥೆಯ ಹೆಸರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಹುದ್ದೆಗಳ ಸಂಖ್ಯೆ : 444
ಆಯ್ಕೆ ವಿಧಾನ : ನೇರ ಸಂದರ್ಶನ
ಪ್ರಾರಂಭ ದಿನಾಂಕ : 08/02/2024
ಕೊನೆಯ ದಿನಾಂಕ : 13/02/2024
ನೇರ ಸಂದರ್ಶನ ಸ್ಥಳ : ಡಾ.ರಾಜ್‌ಕುಮಾರ್ ಗ್ಲಾಸ್‌ ಹೌಸ್, ಬಿಬಿಎಂಪಿ ಹೆಡ್‌ ಆಫೀಸ್, ಎನ್‌.ಆರ್‌.ಸರ್ಕಲ್, ಬೆಂಗಳೂರು.

BBMP ಖಾಲಿ ಹುದ್ದೆಯ ಒಟ್ಟು ಪೋಸ್ಟ್ 2024

ಹುದ್ದೆ ಹುದ್ದೆಗಳ ಸಂಖ್ಯೆ
ಬಯೋ ಮೆಡಿಕಲ್ ಇಂಜಿನಿಯರ್ 1
ಜೋನಲ್ ಪ್ರೋಗ್ರಾಮ್ ಮ್ಯಾನೇಜರ್ 2
ಎಪಿಡೆಮಿಯೋಲಾಜಿಸ್ಟ್ 1
ಪಿ.ಹೆಚ್.ಸಿ.ಓ (ಎ.ಎನ್.ಎಂ) 154
ಹೆಚ್.ಐ.ಓ (ಎಂ.ಹೆಚ್.ಡಬ್ಲ್ಯೂ) 115
ಸ್ಟಾಫ್ ನರ್ಸ 40
ಫಾರ್ಮಾಸಿಸ್ಟ್ 48
ಲ್ಯಾಬ್ ಟೆಕ್ನಿಷಿಯನ್ 5
ಓಬಿಜಿ 4
ಪಿಡಿಯಾಟ್ರಿಷನ್ 2
ಫಿಜಿಷಿಯನ್ 5
ಅನಾಸ್ಥೆಟಿಸ್ಟ್ 2
ರೆಡಿಯೋಲಾಜಿಸ್ಟ್ 6
ಓಟಿ ಟೆಕ್ನಿಷಿಯನ್ 1
ಆಡಿಯೋಲಾಜಿಸ್ಟ್ 1
ಮೆಡಿಕಲ್ ಆಫೀಸರ್ 1
ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್ 2
ಲ್ಯಾಬ್ ಟೆಕ್ನೋಲಾಜಿಸ್ಟ್ 4
ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ 6
ಪ್ಯಾರಾ ಮೆಡಿಕಲ್ ವರ್ಕರ್ 2
ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ 1
ಓಫ್ಥಲ್ಮೊಲೊಜಿಸ್ಟ್ 1
ಕಮ್ಯೂನಿಟಿ ನರ್ಸ್ 1
ಸೈಕಿಯಾಟ್ರಿಕ್ ನರ್ಸ್ 1

ಅರ್ಜಿ ಶುಲ್ಕದ ವಿವರಗಳು :

ಅರ್ಜಿ ಶುಲ್ಕವಿಲ್ಲ

ವಿದ್ಯಾರ್ಹತೆ :

BBMP ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ 10th / ಪಿಯುಸಿ / ಡಿಪ್ಲೊಮ / ಎಂಬಿಬಿಎಸ್ / ಬಿಎಸ್ಸಿ / ನರ್ಸಿಂಗ್ / ಎಂಡಿ / ಇತರೆ ಶೈಕ್ಷಣಿಕ ಅರ್ಹತೆ ಪಾಸ್ ಮಾಡಿರಬೇಕು.

ಅಭ್ಯರ್ಥಿಯ ವಯೋಮಿತಿ :

  • ಕನಿಷ್ಠ ವಯಸ್ಸು : 18 Years
  • ಗರಿಷ್ಠ ವಯಸ್ಸು : 65 Years

ಆಯ್ಕೆ ಪ್ರಕ್ರಿಯೆ ವಿವರಗಳು :

ವಾಕ್ ಇನ್ ಸಂದರ್ಶನ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

Spread the Knowledge